ಬೆಂಗಳೂರು : ಬೆಂಗಳೂರಿನಲ್ಲಿ ಕದ್ದುಮುಚ್ಚಿ ಮಹಿಳೆಯರ ಸ್ನಾನದ ವಿಡಿಯೋ ಸೆರೆ ಹಿಡಿಯುತ್ತಿದ್ದ ವಿಕೃತ ಕಾಮುಕನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಹಾಜ ಮೊಯಿನುದ್ದಿನ್ ಎಂದು ಗುರುತಿಸಲಾಗಿದೆ. ಕಾಡುಗೋಡಿ ಪೊಲೀಸರು ಈತನ ಬಳಿಯಿದ್ದ ವಿಡಿಯೋ ಡಿಲೀಟ್ ಮಾಡಿ ಜೈಲಿಗಟ್ಟಿದ್ದಾರೆ.
ವೃತ್ತಿಯಲ್ಲಿ ಎಲೆಕ್ಟ್ರಿಶಿಯನ್ ಆಗಿದ್ದ ಚನ್ನಸಂದ್ರ ಮೂಲದ ಮೊಯಿನುದ್ದೀನ್ ಮಹಿಳೆಯರು ಸ್ನಾನ ಮಾಡುವುದನ್ನು ಕದ್ದು ಮುಚ್ಚಿ ಸೆರೆ ಹಿಡಿಯುತ್ತಿದ್ದ. ಅಂತೆಯೇ ಮಂಗಳವಾರ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ತಾಯಿ-ಮಗಳು ಸ್ನಾನ ಮಾಡುವ ದೃಶ್ಯ ಸೆರೆಹಿಡಿದಿದ್ದಾನೆ. ಇದನ್ನು ಮಗಳು ನೋಡಿದ್ದು, ಗಾಬರಿಗೊಂಡು ತಂದೆಗೆ ವಿಷಯ ಹೇಳಿದ್ದಾಳೆ. ಆದರೆ ತಂದೆ ಬರುವಷ್ಟರಲ್ಲಿ ಕಾಮುಕ ಎಸ್ಕೇಪ್ ಆಗಿದ್ದಾನೆ. ನಂತರ ಕಾಡುಗೋಡಿ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ತನಿಖೆ ನಡೆಸಿ ಆರೋಪಿಯನ್ನ ಬಂಧಿಸಿದ್ದಾರೆ.
You Might Also Like
TAGGED:ಸ್ನಾನದ ವಿಡಿಯೋ