ಉತ್ತರ ಪ್ರದೇಶ : ಪಾಪಿ ಪತ್ನಿಯೋರ್ವಳು ತನ್ನ ಗಂಡನಿಗೆ ಮದ್ಯ ಕುಡಿಸಿ ಲವರ್ ಸಹಾಯದಿಂದ ಗಂಡನ ತಲೆ ಕತ್ತರಿಸಿ ಹತ್ಯೆಗೈದ ಘಟನೆ ಉತ್ತರ ಪ್ರದೇಶದ ಉನ್ನಾವೋದಲ್ಲಿ ನಡೆದಿದೆ.
ಪತಿಯ ಶಿರಚ್ಚೇದ ಮಾಡಿದ ನಂತರ ಪತ್ನಿ ತನ್ನ ಲವರ್ ಸಹಾಯದಿಂದ ಶವವನ್ನು ವಿಲೇವಾರಿ ಮಾಡಿದ್ದಾಳೆ.
ಹನಿಮೂನ್ ಮರ್ಡರ್ ಪ್ರಕರಣದ ರೀತಿಯಲ್ಲೇ ಈ ಘಟನೆ ನಡೆದಿದೆ. ಇಮ್ರಾನ್ ಎಂಬ ವ್ಯಕ್ತಿಯ ಪತ್ನಿ ಶೀಬಾ ತನ್ನ ಪ್ರಿಯಕರ ಫರ್ಮಾನ್ ಜೊತೆ ಸೇರಿ ಈ ಕೃತ್ಯ ಎಸಗಿದ್ದಾನೆ.
ಕಳೆದ ಮೂರು ವರ್ಷದಿಂದ ಶೀಬಾ ಹಾಗೂ ಫರ್ಮಾನ್ ಅನೈತಿಕ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಇಮ್ರಾನ್ ಗೆ ಮದ್ಯ ಕುಡಿಸಿ ಬೈಕ್ ನಲ್ಲಿ ಕರೆದುಕೊಂಡು ಹೋಗಿ ತಲೆ ಕತ್ತರಿಸಿ ಶವವನ್ನ ಚರಂಡಿಯಲ್ಲಿ ಎಸೆದಿದ್ದರು. ಸದ್ಯ ಇಬ್ಬರನ್ನು ಬಂಧಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
You Might Also Like
TAGGED:ಮದ್ಯ