ಇಸ್ಲಾಮಾಬಾದ್: ಬಲೂಚ್ ಉಗ್ರರ ಅಟ್ಟಹಾಸಕ್ಕೆ 9 ಪ್ರಯಾಣಿಕರು ಬಲಿಯಾಗಿರುವ ಘಟನೆ ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ನಡೆದಿದೆ.
ಝೋಬ್ ಜಿಲ್ಲೆಯ ಸುರ್-ಡಕೈ ಪ್ರದೇಶದ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಶಸ್ತ್ರಸಜ್ಜಿತ ಉಗ್ರರು ಪಂಜಾಬ್ ಗೆ ಹೋಗುತ್ತಿದ್ದ ಎರಡು ಬಸ್ ಗಳನ್ನು ತಡೆದು ಪ್ರಯಾಣಿಕರ ಗುರುತಿನ ಚೀಟಿ ಪರಿಶೀಲಿಸಿ 9 ಪ್ರಯಾಣಿಕರನ್ನು ಬಸ್ ಗಳಿಂದ ಇಳಿಸಿ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ.
ಮೃತ 9 ಜನರು ಪಂಜಾಬ್ ನ ವಿವಿಧ ಪ್ರಾಂತ್ಯದ ಜನರು ಎಂದು ಸಹಯಾಕ ಪೊಲೀಸ್ ಆಯುಕ್ತ ಝೋಬ್ ನವೀದ್ ತಿಳಿಸಿದ್ದಾರೆ. ನಿಷೇಧಿತ ಸಂಘಟನೆ ಬಲೂಚಿಸ್ತಾನ ಲಿಬರೇಷನ್ ಫ್ರಂಟ್ ಹತ್ಯೆಯ ಹೊಣೆ ಹೊತ್ತುಕೊಂಡಿದೆ.