ಬೆಂಗಳೂರು : ಪತಿಯೇ ಕಿರುತೆರೆ ನಟಿಗೆ ಚಾಕು ಇರಿದ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಸದ್ಯ ಶೃತಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಹನುಮಂತನಗರದ ಮುನೇಶ್ವರ ಲೇಔಟ್ ನಲ್ಲಿ ಈ ಘಟನೆ ನಡೆದಿದೆ. ಮಂಜುಳಾ ಅಲಿಯಾಸ್ ಶ್ರುತಿಗೆ ಪತಿ ಚಾಕು ಇರಿದಿದ್ದಾನೆ. ಅಮೃತಧಾರೆ ಸೇರಿ ಹಲವು ಧಾರಾವಾಹಿಗಳಲ್ಲಿ ಮಂಜುಳಾ ಅಲಿಯಾಸ್ ಶ್ರುತಿ ನಟಿಸಿದ್ದಾರೆ.
ಅಂಬರೀಷ್ ಎಂಬಾತನನ್ನು ಪ್ರೀತಿಸಿ ಮದುವೆಯಾಗಿದ್ದ ಶ್ರುತಿಗೆ ಇಬ್ಬರು ಮಕ್ಕಳಿದ್ದರು. ಹನುಮಂತನರದಲ್ಲಿ ಲೀಸ್ ಗೆ ಮನೆ ಪಡೆದು ವಾಸವಿದ್ದರು. ಆದರೆ ಶೃತಿ ನಡವಳಿಕೆ ಸರಿಇಲ್ಲ ಎಂದು ಆರೋಪಿಸಿದ ಪತಿ ಶ್ರುತಿಗೆ ಪತಿ ಚಾಕು ಇರಿದಿದ್ದಾನೆ ಎನ್ನಲಾಗಿದೆ. ಸದ್ಯ ಶೃತಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇಬ್ಬರ ನಡುವೆ ಹೊಂದಾಣಿಕೆ ಸರಿಯಿಲ್ಲದೇ ಇದ್ದರಿಂದ ಇಬ್ಬರು ಪ್ರತ್ಯೇಕವಾಗಿದ್ದರು. ಗಂಡನಿಂದ ದೂರವಿದ್ದ ಶ್ರುತಿ ಅಣ್ಣನ ಜೊತೆ ವಾಸವಾಗಿದ್ದರು. ಲೀಸ್ ಹಣದ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದಿತ್ತು ಎನ್ನಲಾಗಿದೆ. ಈ ಸಂಬಂಧ ಹನುಮಂತರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ನಂತರ ರಾಜಿ ಸಂಧಾನದ ಮೂಲಕ ಗಂಡ ಹೆಂಡತಿ ಒಂದಾಗಿದ್ದರು. ಆದರೆ ಇದರ ಮಾರನೇ ದಿನವೇ ಗಂಡ ಪತ್ನಿಗೆ ಚಾಕು ಇರಿದಿದ್ದಾನೆ ಎನ್ನಲಾಗಿದೆ.