ನವದೆಹಲಿ:- ದೆಹಲಿ-ಎನ್.ಸಿ.ಆರ್. ಪ್ರದೇಶದಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ನೋಯ್ಡಾ, ಗಾಜಿಯಾಬಾದ್, ಗುರುಗ್ರಾಮ ಸೇರಿದಂತೆ ಹಲವು ಕಡೆ ಭೂಕಂಪ ಉಂಟಾಗಿದ್ದು, ಕೆಲ ಸೆಕೆಂಡ್ ಭೂಮಿ ನಡುಗಿದ ಅನುಭವವಾಗಿದೆ.
ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 4.4 ರಷ್ಟು ದಾಖಲಾಗಿದೆ. ಬೆಳಗ್ಗೆ 9 ಗಂಟೆ 4 ನಿಮಿಷದ ಸುಮಾರಿಗೆ ದೆಹಲಿಯ ಸುತ್ತಮುತ್ತ ಭೂಮಿ ಕಂಪಿಸಿದೆ.
ಸುಮಾರು 10 ಸೆಕೆಂಡ್ ಕಾಲ ಭೂಮಿ ಕಂಪಿಸಿದೆ. ದೆಹಲಿ-NCR ಪ್ರದೇಶದಲ್ಲಿ ಗುರುವಾರ ಪ್ರಬಲ ಭೂಕಂಪ ಸಂಭವಿಸಿದ್ದು, ಉತ್ತರ ಭಾರತದ ಹಲವಾರು ಭಾಗಗಳಲ್ಲಿ ಕಂಪನದ ಅನುಭವವಾಗಿದೆ. ಭೂಕಂಪದ ಪರಿಣಾಮವಾಗಿ ಕಟ್ಟಡಗಳು ನಡುಗಿದವು ಮತ್ತು ನಿವಾಸಿಗಳು ಹೊರಗೆ ಓಡುವಂತೆ ಮಾಡಲಾಯಿತು, ಆದರೆ ಹಾನಿ ಅಥವಾ ಗಾಯಗಳ ಬಗ್ಗೆ ತಕ್ಷಣದ ವರದಿಗಳಿಲ್ಲ.
ಹರಿಯಾಣದ ಝಜ್ಜರ್‌ನಲ್ಲಿ ಕೇಂದ್ರಬಿಂದು ಕಂಡು ಬಂದಿದೆ. ಭೂಕಂಪದಿಂದಾಗಿ ಜನ, ಮನೆ ಕಚೇರಿಗಳಿಂದ ಹೊರಗೆ ಓಡಿ ಬಂದಿದ್ದಾರೆ. ದೆಹಲಿಯಿಂದ 60 ಕಿಲೋಮೀಟರ್ ದೂರದಲ್ಲಿ ಹರಿಯಾಣದ ರೋಹ್ಟಕ್ ಸಮೀಪ ಕೇಂದ್ರ ಬಿಂದು ಕಂಡುಬಂದಿದೆ.
ನೋಯ್ಡಾ, ಗಾಜಿಯಾಬಾದ್, ಗುರುಗ್ರಾಮ, ಫರಿದಾಬಾದ್, ಹರಿಯಾಣ, ದೆಹಲಿ, ಎನ್.ಸಿ.ಆರ್., ರೋಹ್ಟಕ್ ಸೇರಿದಂತೆ ಉತ್ತರ ಭಾರತದ ಹಲವು ಕಡೆ ಭೂಕಂಪ ಸಂಭವಿಸಿದೆ.
Strong earthquake tremors felt in Delhi. Details awaited. pic.twitter.com/YTWfWzc16G
— ANI (@ANI) July 10, 2025
EQ of M: 4.4, On: 10/07/2025 09:04:50 IST, Lat: 28.63 N, Long: 76.68 E, Depth: 10 Km, Location: Jhajjar, Haryana.
— National Center for Seismology (@NCS_Earthquake) July 10, 2025
For more information Download the BhooKamp App https://t.co/5gCOtjcVGs @DrJitendraSingh @OfficeOfDrJS @Ravi_MoES @Dr_Mishra1966 @ndmaindia pic.twitter.com/uDNjvD8rWT