BREAKING : ‘ವಡೋದರಾ ಸೇತುವೆ’ ಕುಸಿತ ದುರಂತ :  ಮೃತರ ಸಂಖ್ಯೆ 12 ಕ್ಕೇರಿಕೆ,  ತಲಾ 2 ಲಕ್ಷ ಪರಿಹಾರ ಘೋಷಣೆ.!

ಗುಜರಾತ್ : ‘ಗುಜರಾತ್’ ನ ವಡೋದರದಲ್ಲಿ ಸೇತುವೆ ಕುಸಿದು ಬಿದ್ದು ಮೃತಪಟ್ಟವರ ಸಂಖ್ಯೆ 12 ಕ್ಕೆ ಏರಿಕೆಯಾಗಿದೆ.ಮೃತರ ಕುಟುಂಬಕ್ಕೆ   ತಲಾ 2 ಲಕ್ಷ ಪರಿಹಾರ ಘೋಷಣೆ ಮಾಡಲಾಗಿದೆ.

ಹೌದು, ಇಂದು ಬುಧವಾರ ಬೆಳಿಗ್ಗೆ ಗುಜರಾತ್ನ ಗಂಭೀರಾ ಸೇತುವೆಯ ಒಂದು ಭಾಗ ಕುಸಿದು ಬಿದ್ದ ಪರಿಣಾಮ 12 ಜನರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.

ವಡೋದರಾ ಜಿಲ್ಲೆಯ ಪದ್ರಾದಲ್ಲಿ ಬೆಳಿಗ್ಗೆ 7.30 ರ ಸುಮಾರಿಗೆ ಸೇತುವೆ ಕುಸಿದಿದೆ. ರಾಜ್ಯ ಹೆದ್ದಾರಿಯ ಉದ್ದಕ್ಕೂ ಮಹಿಸಾಗರ್ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಈ ಸೇತುವೆ ವಡೋದರಾ ಮತ್ತು ಆನಂದ್ ಅನ್ನು ಸಂಪರ್ಕಿಸುತ್ತದೆ.ಘಟನೆಯ ನಂತರ ಹಲವಾರು ವಾಹನಗಳು ನೀರಿನೊಳಗೆ ಮುಳುಗಿವೆ.

ಮುಳುಗಿದ ವಾಹನಗಳಲ್ಲಿ ಎರಡು ಟ್ರಕ್ಗಳು ಮತ್ತು ಎರಡು ವ್ಯಾನ್ಗಳು ಸೇರಿವೆ. ರಸ್ತೆಗಳು ಮತ್ತು ಕಟ್ಟಡಗಳ ಇಲಾಖೆಯ ಕಾರ್ಯದರ್ಶಿ ಪಿಆರ್ ಪಟೇಲಿಯಾ ಅವರ ಪ್ರಕಾರ, ತಜ್ಞರ ತಂಡವನ್ನು ಸ್ಥಳಕ್ಕೆ ರವಾನಿಸಲಾಗಿದೆ. ಪಿಆರ್ ಪಟೇಲಿಯಾ, “ಗಂಭೀರ ಸೇತುವೆಗೆ ಹಾನಿಯಾಗಿದ್ದು ಅಪಘಾತಕ್ಕೆ ಕಾರಣವಾದ ಬಗ್ಗೆ ನಮಗೆ ಮಾಹಿತಿ ಬಂದಿದೆ. ತಜ್ಞರ ತಂಡವನ್ನು ಘಟನೆಯ ಸ್ಥಳಕ್ಕೆ ಕಳುಹಿಸಲಾಗಿದೆ” ಎಂದು ಹೇಳಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read