ಚಿಕ್ಕಮಗಳೂರು: ಪತಿಯ ಜೊತೆಗೆ ಜಗಳ ಮಾಡಿಕೊಂಡು ಕೆರೆಗೆ ಹಾರಿದ್ದ ಮಹಿಳೆ ತನ್ನನ್ನು ರಕ್ಷಿಸುವಂತೆ ಆಂಜನೇಯನ ಮೊರೆಯಿಡುತ್ತಿದ್ದ ಮಹಿಳೆಯನ್ನು ಸ್ಥಳೀಯರು ದೇವರಂತೆ ಬಂದು ರಕ್ಷಿಸಿದ ಘಟನೆ ಚಿಕ್ಕಮಗಳುರಿನಲ್ಲಿ ನಡೆದಿದೆ.
ಚಿಕ್ಕಮಗಳೂರು ತಾಲೂಕಿನ ಅಲ್ಲಂಪುರದಲ್ಲಿ ಈ ಘಟನೆ ನಡೆದಿದೆ. ರಾಮನಹಳ್ಳಿ ನಿವಾಸಿ ರಂಜಿತಾ ಎಂಬ ಮಹಿಳೆ ಕೆರೆಗೆ ಹಾರಿದ್ದಾರೆ. ಸಾಯಬೇಕು ಎಂದು ಕೆರೆಗೆ ಜಿಗಿದ ರಂಜತಾ ಭಯಗೊಂಡು ಆಂಜನೇಯ ತನನ್ನು ಕಾಪಾಡು ಎಂದು ಪ್ರಾರ್ಥಿಸುತ್ತಿದ್ದರು. ಕೆರೆಯಲ್ಲಿ ಯಾರೋ ರಕ್ಷಣೆಗಾಗಿ ಪರದಾಡುತ್ತಿರುವುದನ್ನು ಕಂಡ ಕೆರೆ ಪಕ್ಕದ ಹೋಂ ಸ್ಟೇ ಮಾಲೀಕ ಮಹೇಶ್ ಎಂಬುವವರು, ಸ್ಥಳೀಯ ಹುಡುಗರನ್ನು ಕರೆಸಿದ್ದಾರೆ.
ಕೆರೆ ಬಳಿ ಬಂದ ಸ್ಥಳೀಯರು ಮಹಿಳೆಯನ್ನು ರಕ್ಷಿಸಿದ್ದಾರೆ. ಸದ್ಯ ಮಹಿಳೆ ರಂಜಿತಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ.