ಬೆಂಗಳೂರು : ರಾಜ್ಯ ಸರ್ಕಾರವು ಹಣಕಾಸು ಇಲಾಖೆಯಲ್ಲಿ ಹಣಕಾಸು ಸಲಹೆಗಾರರ ಹುದ್ದೆಗೆ ಅರ್ಜಿ ಆಹ್ವಾನಿಸಿದೆ.
ಕರ್ನಾಟಕ ಸರ್ಕಾರದ ಹಣಕಾಸು ಇಲಾಖೆಯಲ್ಲಿ ರಾಜ್ಯ ಸಾರ್ವಜನಿಕ ವಲಯದ ಸಂಸ್ಥೆಗಳೊಂದಿಗೆ ಮೇಲ್ವಿಚಾರಣೆ ಮತ್ತು ಸಮನ್ವಯಕ್ಕಾಗಿ ಕೆಲಸ ಮಾಡಲು ಅರ್ಹ ಸಿಬ್ಬಂದಿಯಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ
ಆಸಕ್ತ ವ್ಯಕ್ತಿಗಳು https://finance.karnataka.gov.in ವೆಬ್ಸೈಟ್ನಲ್ಲಿ ಲಭ್ಯವಿರುವ ನಮೂನೆಯಲ್ಲಿ, ಕೆಲಸದ ಅನುಭವದ ವಿವರಗಳು ಮತ್ತು ಇತರ ಸಂಬಂಧಿತ ದಾಖಲೆಗಳೊಂದಿಗೆ ಆಗಸ್ಟ್ 4, 2025 ರೊಳಗೆ ಕಾರ್ಯದರ್ಶಿ (ಹಣಕಾಸು ರಿಫೋನ್ಸ್), ಕೊಠಡಿ ಸಂಖ್ಯೆ 401. 4 ಗೇಟ್, 4 ಮಹಡಿ, ಎಂಎಸ್ ಕಟ್ಟಡ. ಡಾ. ಬಿ.ಆರ್. ಅಂಬೇಡ್ಕರ್ ವೀಧಿ, ಬೆಂಗಳೂರು-560001 ಗೆ ಅರ್ಜಿ ಸಲ್ಲಿಸಬಹುದು. ಅರ್ಜಿಗಳನ್ನು ಅಂಚೆ ಮೂಲಕ ಮೇಲಿನ ವಿಳಾಸಕ್ಕೆ ಅಥವಾ ಇಮೇಲ್ ಮೂಲಕ (sess fr-digkarmaka.до.) ಕಳುಹಿಸಬಹುದು.


