ಬೆಂಗಳೂರು: ಬೆಂಗಳೂರಿನಲ್ಲಿ 8 ಡಿಸಿಪಿ ಕಚೇರಿಗಳಿಗೆ ಹೆಚ್ಚುವರಿಗಾಗಿ 3 ಡಿಸಿಪಿ ಕಚೇರಿ ಸೇರ್ಪಡೆ ಮಾಡಲಾಗಿದ್ದು ಇದರೊಂದಿಗೆ ಡಿಸಿಪಿ ಕಚೇರಿಗಳ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.
ಡಿಸಿಪಿ ಕೆಂಗೇರಿ, ಡಿಸಿಪಿ ಎಲೆಕ್ಟ್ರಾನಿಕ್ ಸಿಟಿ ವಿಭಾಗ ಮತ್ತು ಡಿಸಿಪಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ವಿಭಾಗಗಳನ್ನು ಹೆಚ್ಚುವರಿಯಾಗಿ ಸೇರ್ಪಡೆ ಮಾಡಲಾಗಿದೆ.
ಎಲೆಕ್ಟ್ರಾನಿಕ್ ಸಿಟಿ ವಿಭಾಗದ ವ್ಯಾಪ್ತಿಗೆ ಆರು ಪೊಲೀಸ್ ಠಾಣೆಗಳನ್ನು ಸೇರ್ಪಡೆ ಮಾಡಲಾಗಿದೆ. ಕೆಂಗೇರಿ ವಿಭಾಗಕ್ಕೆ 6 ಪೊಲೀಸ್ ಠಾಣೆಗಳನ್ನು ಸೇರ್ಪಡೆ ಮಾಡಲಾಗಿದ್ದು, ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ವ್ಯಾಪ್ತಿಗೂ 6 ಪೊಲೀಸ್ ಠಾಣೆಗಳನ್ನು ಸೇರ್ಪಡೆ ಮಾಡಲಾಗಿದೆ.