ಮುಂಬೈ : ಖಾಸಗಿ ವಿಡಿಯೋ ಪ್ರಸಾರ ಮಾಡುವ ಆರೋಪದ ಮೇಲೆ ಸುಲಿಗೆ ಮಾಡಿ ಬ್ಲಾಕ್ಮೇಲ್ ಮಾಡಿದ್ದಕ್ಕೆ ಬೇಸತ್ತು 32 ವರ್ಷದ ವ್ಯಕ್ತಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತರನ್ನು ರಾಜ್ ಲೀಲಾ ಮೋರ್ ಎಂದು ಗುರುತಿಸಲಾಗಿದೆ, ವೃತ್ತಿಯಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿದ್ದರು. ಮುಂಬೈನ ಸಾಂತಾಕ್ರೂಜ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ವಿಷಯ ಬೆಳಕಿಗೆ ಬಂದ ಕೂಡಲೇ ವಕೋಲಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಯಿತು. ತನಿಖೆಯ ಸಮಯದಲ್ಲಿ, ಪೊಲೀಸರು ರಾಜ್ ಬಿಟ್ಟುಹೋದ ಮೂರು ಪುಟಗಳ ಡೆತ್ ನೋಟ್ ವಶಪಡಿಸಿಕೊಂಡರು. ಪೊಲೀಸರ ಪ್ರಕಾರ ರಾಜ್ ತನ್ನ ಆತ್ಮಹತ್ಯೆಗೆ ರಾಹುಲ್ ಪರ್ವಾನಿ ಮತ್ತು ಸಬಾ ಖುರೇಷಿ ಎಂಬ ಇಬ್ಬರು ವ್ಯಕ್ತಿಗಳನ್ನು ಹೊಣೆಗಾರರನ್ನಾಗಿ ಮಾಡಿದ್ದಾರೆ.
ತನ್ನ ಡೆತ್ ನೋಟ್ ನಲ್ಲಿ ” ಇಬ್ಬರು ಆರೋಪಿಗಳು ತನ್ನ ಕಂಪನಿಯ ಖಾತೆಗಳಿಂದ ಹಣವನ್ನು ಕದಿಯಲು ಮತ್ತು ತನ್ನ ಸ್ವಂತ ಸೇವಿಂಗ್ಸ್ ಕೊಡಲು ಒತ್ತಾಯಿಸಿದ್ದಾರೆ ಎಂದು ರಾಜ್ ಹೇಳಿದ್ದಾರೆ. ವಕೋಲಾ ಪೊಲೀಸರ ಪ್ರಕಾರ, ಇಬ್ಬರು ಆರೋಪಿಗಳ ವಿರುದ್ಧ ಸುಲಿಗೆ ಮತ್ತು ಆತ್ಮಹತ್ಯೆಗೆ ಪ್ರಚೋದನೆಯ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ.
ರಾಜ್ ಷೇರು ಮಾರುಕಟ್ಟೆಯಲ್ಲಿ ಮಾಡುತ್ತಿರುವ ಬೃಹತ್ ಹೂಡಿಕೆಗಳು ಮತ್ತು ಅವರ ಹೆಚ್ಚಿನ ಸಂಬಳದ ಕೆಲಸದ ಬಗ್ಗೆ ಆರೋಪಿಗಳಿಗೆ ತಿಳಿದಿತ್ತು ಎಂದು ತಿಳಿದುಬಂದಿದೆ. ಅವರ ಖಾಸಗಿ ವೀಡಿಯೊವನ್ನು ಪ್ರಸಾರ ಮಾಡುವುದಾಗಿ ಬೆದರಿಕೆ ಹಾಕಿ ಬ್ಲ್ಯಾಕ್ಮೇಲ್ ಮಾಡುವ ಮೂಲಕ, ಅವರ ಸಂಸ್ಥೆಯ ಖಾತೆಯಿಂದ ಹಣವನ್ನು ತಮ್ಮ ವೈಯಕ್ತಿಕ ಖಾತೆಗಳಿಗೆ ವರ್ಗಾಯಿಸುವಂತೆ ಒತ್ತಾಯಿಸಲಾಯಿತು. ರಾಜ್ನಿಂದ ಐಷಾರಾಮಿ ಕಾರನ್ನು ಸಹ ಬಲವಂತವಾಗಿ ತೆಗೆದುಕೊಂಡರು.
ವರದಿಯ ಪ್ರಕಾರ, ಬಲಿಪಶು ಡೆತ್ ನೋಟ್ ನಲ್ಲಿ ಹೀಗೆ ಬರೆದಿದ್ದಾರೆ, “ನನ್ನ ಪ್ರೀತಿಯ ತಾಯಿ, ಕ್ಷಮಿಸಿ, ನಾನು ನಿಮ್ಮ ಒಳ್ಳೆಯ ಮಗನಾಗಲು ಸಾಧ್ಯವಿಲ್ಲ, ನೀವು ನನ್ನ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ರಿ, ಆದರೆ ನಾನು ನಿಮ್ಮನ್ನು ಒಂಟಿಯಾಗಿ ಬಿಟ್ಟು ಹೋಗುತ್ತಿದ್ದೇನೆ.
ದೇವರು ನಿಮ್ಮ ಮುಂದಿನ ಜನ್ಮದಲ್ಲಿ ನನ್ನಂತಹ ಮಗನನ್ನು ನಿಮಗೆ ಎಂದಿಗೂ ನೀಡದಿರಲಿ. ನಾನು ತುಂಬಾ ಕೆಟ್ಟವನಾಗಿದ್ದೇನೆ, ಪೂನಂ ಆಂಟಿ ದಯವಿಟ್ಟು ನನ್ನ ತಾಯಿಯನ್ನು ನೋಡಿಕೊಳ್ಳಿ. ನನ್ನ ಬಳಿ ವಿವಿಧ ಖಾತೆಗಳಲ್ಲಿ ಪಾಲಿಸಿಗಳಿವೆ, ಆ ಹಣವನ್ನು ತೆಗೆದುಕೊಂಡು ನನ್ನ ತಾಯಿಗೆ ಕೊಡಿ. ಐಯಮ್ ಸ್ವಾರಿ.” ” ಇಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಆತ್ಮಹತ್ಯೆಗೆ ರಾಹುಲ್ ಪರ್ವಾನಿ ಕಾರಣ. ಅವರು ತಿಂಗಳುಗಟ್ಟಲೆ ನನ್ನನ್ನು ಬ್ಲಾಕ್ಮೇಲ್ ಮಾಡಿದ್ದಾರೆ, ಅವರು ನಾನು ಕೂಡಿಟ್ಟ ಹಣ ಪಡೆದಿದ್ದಾರೆ. ಮತ್ತು ನನ್ನ ಕಂಪನಿ ಖಾತೆಯಿಂದ ಹಣವನ್ನು ಕದ್ದಿದ್ದಾರೆ, ರಾಹುಲ್ ಪರ್ವಾನಿ ಮತ್ತು ಸಬಾ ಕ್ವೆರೇಶಿ ನನ್ನ ಸಾವಿಗೆ ಕಾರಣರಾಗಿದ್ದಾರೆ.” ರಾಜ್ ಮೋರೆ ಅವರಿಗೆ ಅಂತಿಮ ವಿದಾಯ” ಎಂದು ಪತ್ರದಲ್ಲಿ ಬರೆಯಲಾಗಿದೆ.
ಖಾಸಗಿ ವೀಡಿಯೊವನ್ನು ಪ್ರಸಾರ ಮಾಡುವುದಾಗಿ ಬೆದರಿಸುವ ಮೂಲಕ ಕಳೆದ 18 ತಿಂಗಳುಗಳಲ್ಲಿ ಈ ಇಬ್ಬರು ಸಂತ್ರಸ್ತೆಯಿಂದ 3 ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ಸುಲಿಗೆ ಮಾಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.