ಡಾಕ್ಟರ್ ಆಗುವ ಕನಸು ಭಗ್ನ: ಭಗವಾನ್ ಶಿವನಿಗೆ ಪತ್ರ ಬರೆದು ಪ್ರಾಣ ಬಿಟ್ಟ ತೆಲಂಗಾಣದ ಯುವಕ !

ರಾಂಚಿ: ತೆಲಂಗಾಣದ ರಾಜಣ್ಣ ಸಿರ್ಸಿಲ್ಲಾ ಜಿಲ್ಲೆಯಲ್ಲಿ ನಡೆದ ಹೃದಯ ಕಲಕುವ ಘಟನೆಯಲ್ಲಿ, 25 ವರ್ಷದ ಯುವಕನೊಬ್ಬ ತನ್ನ ಹಣೆಬರಹವನ್ನು ಪ್ರಶ್ನಿಸಿ ಶಿವನಿಗೆ ಭಾವನಾತ್ಮಕ ಪತ್ರ ಬರೆದು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಮೃತನನ್ನು ರೋಹಿತ್ ಎಂದು ಗುರುತಿಸಲಾಗಿದೆ. ರೋಹಿತ್ ಎಂ.ಎಸ್ಸಿ ಪದವಿ ಪೂರೈಸಿದ್ದಲ್ಲದೆ, ಬಿ.ಎಡ್‌ ಓದುತ್ತಿದ್ದರು. ಅವರ ಕುಟುಂಬದ ಪ್ರಕಾರ, ರೋಹಿತ್‌ಗೆ ಸದಾ ವೈದ್ಯನಾಗಬೇಕೆಂಬ ಕನಸಿತ್ತು, ಆದರೆ ಅದನ್ನು ಸಾಧಿಸಲು ಸಾಧ್ಯವಾಗದ ಕಾರಣ ಅವರು ತೀವ್ರ ಅಸಮಾಧಾನಗೊಂಡಿದ್ದರು.

ರೋಹಿತ್ ಸಾವಿನ ನಂತರ ದೊರೆತ ಪತ್ರದಲ್ಲಿ, “ಶಿವನೇ, ನಿನ್ನ ಎಲ್ಲ ಜ್ಞಾನದಿಂದಲೂ ನನ್ನ ಹಣೆಬರಹವನ್ನು ಹೀಗೆ ಬರೆದೆಯಾ? ನಿನ್ನ ಸ್ವಂತ ಮಗನಿಗೂ ಹೀಗೆಯೇ ಬರೆಯುತ್ತಿದ್ದೆಯಾ? ನಾವೇನು ನಿನ್ನ ಮಕ್ಕಳಲ್ಲವೇ?” ಎಂದು ಬರೆದಿದ್ದಾರೆ. “ಬದುಕುವ ನೋವು ಸಾವಿನ ನೋವಿಗಿಂತ ದೊಡ್ಡದು ಮತ್ತು ಹಲವು ಬಾರಿ ಪ್ರಯತ್ನಿಸಿ ನಾನು ಸುಸ್ತಾಗಿದ್ದೇನೆ. ಬಹುಶಃ ಇದು ನನ್ನ ಹಣೆಬರಹ” ಎಂದೂ ಅವರು ಬರೆದಿದ್ದಾರೆ.

ಪತ್ರದಲ್ಲಿ, ಅನೇಕ ಒಳ್ಳೆಯ ಹೃದಯಗಳು ಮತ್ತು ಶುದ್ಧ ಆತ್ಮಗಳನ್ನು ಭೇಟಿಯಾಗಲು ತಾನು ಸಂತೋಷಪಟ್ಟಿದ್ದೇನೆ ಎಂದೂ ರೋಹಿತ್ ಉಲ್ಲೇಖಿಸಿದ್ದು, “ಉಳಿದವರ ಬಗ್ಗೆ ಮರೆತುಬಿಡುವುದು ಉತ್ತಮ” ಎಂದೂ ಬರೆದಿದ್ದಾರೆ.

ಕುಟುಂಬ ಸದಸ್ಯರ ಪ್ರಕಾರ, ರೋಹಿತ್ ಆಗಾಗ ಅಸಂತುಷ್ಟರಾಗಿರುತ್ತಿದ್ದರು ಮತ್ತು ತಮ್ಮ ಜೀವನದ ಬಗ್ಗೆ ಹೋರಾಡುತ್ತಿದ್ದರು. ಈ ಘಟನೆ ಯುವಜನರಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಮತ್ತೊಮ್ಮೆ ಕಳವಳ ಮೂಡಿಸಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read