ಬೆಂಗಳೂರು: ದಿನಸಿ ಖರೀದಿಸುವ ನೆಪದಲ್ಲಿ ಸೂಪರ್ ಮಾರ್ಕೆಟ್ ಗೆ ನುಗ್ಗಿದ ಖದೀಮರು, ಸಿಬ್ಬಂದಿಗೆ ಚಾಕು ತೋರಿಸಿ ಕಳ್ಳತನ ನಡೆಸಿರುವ ಘಟನೆ ನಡೆದಿದೆ.
ಬೆಂಗಳೂರಿನ ರಿಚ್ಮಂಡ್ ಟೌನ್ ನಲ್ಲಿರುವ ಸೂಪರ್ ಮಾರ್ಕೆಟ್ ನಲ್ಲಿ ಈ ಘಟನೆ ನಡೆದಿದೆ. ಇಬ್ಬರು ಖದೀಮರು ಸೂಪರ್ ಮಾರ್ಕೆಂಟ್ ಗೆ ದಿನಸಿ ಖರೀದಿಸುವವರಂತೆ ಬಂದಿದ್ದಾರೆ. ಓರ್ವ ದಿನಸಿ ಸಾಮಾನುಗಳನ್ನು ಬ್ಯಾಗ್ ಗೆ ತುಂಬಿಕೊಳ್ಳಲಾರಂಭಿಸಿದರೆ ಮತ್ತೋರ್ವ ಫೋನ್ ನಲ್ಲಿ ಮಾತನಾಡುತ್ತಿದ್ದವನಂತೆ ನಾಟಕವಾಡಿದ್ದಾನೆ. ಇದನ್ನು ಗಮನಿಸಿದ ಅಂಗಡಿ ಮಾಲೀಕ ಆತನ ಬಳಿ ತೆರಳುತ್ತಿದಂತೆ ಫೋನ್ ನಲ್ಲಿ ಮಾತನಾಡುತ್ತಿರುವವನು ಚಾಕು ತೋರಿಸಿ ಬೆದರಿಕೆ ಹಾಕಿದ್ದಾನೆ.
ಆದಾಗ್ಯೂ ಹೆದರದ ಅಂಗಡಿ ಮಾಲೀಕ ದಿನಸಿ ಕದಿಯುತ್ತಿದ್ದ ಕಳ್ಳನನ್ನು ಹಿಡಿದುಕೊಳ್ಳಲು ಯತ್ನಿಸಿದ್ದಾರೆ, ಇಬ್ಬರೂ ತಪ್ಪಿಸಿಕೊಂಡು ಬೈಕ್ ನಲ್ಲಿ ಪರಾರಿಯಾಗಿದ್ದಾರೆ.