ಕಲಬುರಗಿ: ರೇಣುಕಾಸ್ವಾಮಿ ರೀತಿಯಲ್ಲಿಯೇ ಮತ್ತೊಂದು ಕೊಲೆ ನಡೆದಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ. ವ್ಯಕ್ತಿಯನ್ನು ಕಿಡ್ನ್ಯಾಪ್ ಮಾಡಿದ್ದ ದುರುಳರು ಆತನನ್ನು ಹತ್ಯೆಗೈದು ನದಿಗೆ ಬಿಸಾಕಿ ಹೋಗಿರುವ ಘಟನೆ ನಡೆದಿದೆ.
ರಾಘವೇಂದ್ರ(39) ಕೊಲೆಯಾಗಿರುವ ವ್ಯಕ್ತಿ. ರಾಘವೇಂದ್ರ ಎಂಬಾತ ಅಶ್ವಿನಿ ಎಂಬ ಮಹಿಳೆಗೆ ಕಿರುಕುಳ ನೀಡುತ್ತಿದ್ದನಂತೆ. ಈ ಬಗ್ಗೆ ಅಶ್ವಿನಿ ತನ್ನ ಗೆಳೆಯ ಗುರುರಾಜ್ ಗೆ ಹೇಳಿದ್ದಳು. ಗುರುರಾಜ್ ಹಾಗೂ ಗ್ಯಾಂಗ್ ರಾಘವೇಂದ್ರನನ್ನು ಕಿಡ್ನ್ಯಾಪ್ ಮಾಡಿ ಹೊತ್ತೊಯ್ದಿದ್ದಾರೆ.
ಹೀಗೆ ಕರೆದೊಯ್ದವರು ಸ್ಮಶಾನಕ್ಕೆ ಕರೆದುಕೊಂಡು ಹೋಗಿ ಮನಬಂದಂತೆ ಥಳಿಸಿದ್ದಾರೆ. ಗುರುರಾಜ್, ರಾಘವೇಂದ್ರನ ಕಪಾಳಕ್ಕೆ ಭಾರಿಸುತ್ತಿದ್ದಂತೆ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮೃತದೇಹವನ್ನು ನದಿಗೆ ಎಸೆದು ಆರೋಪಿಗಳು ಪರಾರಿಯಾಗಿದ್ದರು. ಸದ್ಯ ಪ್ರಕರಣ ಸಂಬಂಧ ಗುರುರಾಜ್, ಅಶ್ವಿನಿ ಹಾಗೂ ಗ್ಯಾಂಗ್ ನ್ನು ಕಲಬುರಗಿ ಪೊಲೀಸರು ಬಂಧಿಸಿದ್ದಾರೆ.