ಮುಂಬೈ: ರಾಯಗಢ ಕರಾವಳಿಯಲ್ಲಿ ಅನುಮಾನಾಸ್ಪದ ಬೋಟ್ ಪತ್ತೆಯಾಗಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ರಾಯಗಢ ಜಿಲ್ಲೆಯ ರೇವದಂಡ ಕರಾವಳಿ ಬಳಿ ಅನುಮಾನಾಸ್ಪದ ದೋಣಿ ಪತ್ತೆಯಾಗಿದ್ದು, ದೋಣಿ ವಿದೇಶಿ ಮೂಲದ್ದು ಎಂದು ಹೇಳಲಾಗುತ್ತಿದೆ.
ರೇವದಂಡ ಕರಾವಳಿಯಿಂದ ಎರಡು ನಾಟಿಕಲ್ ಮೈಲುಗಳ ದೂರದಲ್ಲಿ ಭದ್ರತಾ ಸಿಬ್ಬಂದಿಗಳು ದೋಣಿಯನ್ನು ಪತ್ತೆ ಮಾಡಿದ್ದಾರೆ. ದೋಣಿ ವಿದೇಶಿ ಗುರುತು ಹೊಂದಿದೆ. ರಾಯಗಡ ಕಡಲಿನಲ್ಲಿ ತೇಲಿ ಬಂದಿರುವ ಶಂಕೆ ವ್ಯಕ್ತವಾಗಿದೆ.
ಅಲ್ಲದೇ ಅಲರ್ಟ್ ಘೋಷಿಸಲಾಗಿದ್ದು, ರಾಯಗಢ ಪೊಲೀಸರು, ಬಾಂಬ್ ಪತ್ತೆ, ವಿಲೇವಾರಿ ದಳ, ನೌಕಾಪಡೆ, ಕರಾವಳಿ ಕಾವಲು ಪಡೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿವೆ.