ಬೆಂಗಳೂರು: ಚೀಟಿ ಹಣದ ಹೆಸರಲ್ಲಿ ಕೋಟಿ ಕೋಟಿ ಹಣ ಸಂಗ್ರಹಿಸಿ ಸಾರ್ವಜನಿಕರಿಗೆ ಮೋಸ ಮಾಡಿ ದಂಪತಿ ಪರಾರಿಯಾಗಿರುವ ಘಟನೆ ಬೆಂಗಳೂರಿನ ಜರಗನಹಳ್ಲಿಯಲ್ಲಿ ನಡೆದಿದೆ.
ಆರೋಪಿಗಳಾದ ಸುಧಾ ಹಾಗೂ ಸಿದ್ದಿಚಾರಿ ಸುಮಾರು 40 ಕೋಟಿ ರೂ. ಚೀಟಿ ಹಣ ಕಟ್ಟಿಸಿಕೊಂಡು ಎಸ್ಕೇಪ್ ಆಗಿದ್ದಾರೆ. ಕಳೆದ ಒಂದು ತಿಂಗಳಿಂದ ದಂಪತಿ ನಾಪತ್ತೆಯಾಗಿದ್ದಾರೆ. ಜರಗನಹಳ್ಳಿಯಲ್ಲಿ 20 ವರ್ಷಗಳಿಂದ ವಾಸವಾಗಿದ್ದ ದಂಪತಿ ಚೀಟಿ ವ್ಯವಹಾರದ ಹೆಸರಲ್ಲಿ 600ಕ್ಕೂ ಹೆಚ್ಚು ಜನರಿಂದ ಹಣ ಕಟ್ಟಿಸಿಕೊಂಡಿದ್ದರು. ಇವರನ್ನು ನಂಬಿದ ಜನರು 5ರಿಂದ 10 ಲಕ್ಷದವರೆಗೂ ಹಣ ನೀಡಿದ್ದಾರೆ. ಆರಂಭದಲ್ಲಿ ಚೀಟಿ ಹಣ ಕೊಡುತ್ತಿದ್ದ ದಂಪತಿ ಕಳೆದ ಒಂದುವರ್ಷದಿಂದ ಹಣ ನೀಡದೇ ಸತಾಯಿಸುತ್ತಿದ್ದರು. ಇದೀಗ ಸುಧಾ ಹಾಗೂ ಸಿದ್ದಾಚಾರಿ ದಂಪತಿ ತಮ್ಮ ಇಬ್ಬರು ಮಕ್ಕಳ ಸಮೇತ ಜೂನ್ ೩ರಂದು ಮಧ್ಯರಾತ್ರಿ ಪರಾರಿಯಾಗಿದ್ದಾರೆ.
ಆರೋಪಿ ದಂಪತಿಗಳ ಬಂಧನಕ್ಕೆ ಪುಂಟೇನಹಳ್ಲಿ ಪೊಲೀಸರು ಮೂರು ತಂಡಗಳನ್ನು ರಚಿಸಿದೆ. ಈ ನಡುವೆ ವಂಚನೆಗೊಳಗಾದವರು ಗೃಹ ಸಚಿವ ಪರಮೇಶ್ವರ್ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ