ಗ್ರಾಮ ಪಂಚಾಯಿತಿಗಳ ವಾಣಿಜ್ಯ ಆಸ್ತಿ ತೆರಿಗೆ ಏರಿಕೆ

ಬೆಂಗಳೂರು: ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಅಪಾರ್ಟ್ಮೆಂಟ್, ವಿಲ್ಲಾ, ವಾಣಿಜ್ಯ ಸಂಕೀರ್ಣ, ಮಾಲ್ ಮತ್ತು ವಸತಿಯೇತರ ಕಟ್ಟಡಗಳು, ಬಹು ಮಾಲೀಕತ್ವದ ಕಟ್ಟಡಗಳ ಆಸ್ತಿ ತೆರಿಗೆ ಹೆಚ್ಚಳವಾಗಲಿದೆ.

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್(ಗ್ರಾಮ ಪಂಚಾಯಿತಿಗಳ ತೆರಿಗೆ, ದರ, ಫೀಜುಗಳ) ನಿಯಮಗಳು -2025 ಕರಡು ಅಧಿಸೂಚನೆಯನ್ನು ರಾಜ್ಯ ಸರ್ಕಾರ ಹೊರಡಿಸಿದೆ. ಆಕ್ಷೇಪಣೆ ಸಲ್ಲಿಕೆಗೆ 15 ದಿನ ಕಾಲಾವಕಾಶ ನೀಡಲಾಗಿದೆ.

ಹೊಸ ನಿಯಮ ಜಾರಿಯಾದಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇರುವ ಅಪಾರ್ಟ್ಮೆಂಟ್, ವಿಲ್ಲಾ, ವಾಣಿಜ್ಯ ಸಂಕೀರ್ಣ, ಮಾಲ್, ವಸತಿಯೇತರ ಕಟ್ಟಡ ಮತ್ತು ಬಹುಮಹಡಿ ಮಾಲೀಕತ್ವದ ಕಟ್ಟಡಗಳ ಆಸ್ತಿ ತೆರಿಗೆ ಹೆಚ್ಚಳವಾಗಲಿದೆ.

ಈಗ ಕಟ್ಟಡಗಳ ಸ್ಥಿರಾಸ್ತಿ ಮಾರ್ಗಸೂಚಿ ದರದಲ್ಲಿ ವರ್ಗೀಕರಣ ಮಾಡಿ ಆಸ್ತಿ ತೆರಿಗೆ ವಿಧಿಸಲಾಗುತ್ತಿದೆ. ತೆರಗೆ ವ್ಯಾಪ್ತಿ ವರ್ಗೀಕರಣದಲ್ಲಿ ವ್ಯಾಪಕ ಬದಲಾವಣೆಯಾಗಲಿದ್ದು, ಪ್ರತಿ ಚದರ ಮೀಟರ್ ಗೆ 50,000 ರೂ.ಗಿಂತ ಹೆಚ್ಚು ಸ್ಥಿರಾಸ್ತಿ ಮಾರ್ಗಸೂಚಿ ದರ ಹೊಂದಿರುವ ಎಲ್ಲಾ ಕಟ್ಟಡಗಳ ತೆರಿಗೆ ಏರಿಕೆಯಾಗಲಿದೆ.

ಪ್ರತಿ ಚದರ ಮೀಟರ್ ಗೆ 40,000 ರೂ.ಗಿಂತ ಹೆಚ್ಚು ಸ್ಥಿರಾಸ್ತಿ ಮಾರ್ಗಸೂಚಿ ದರ ಹೊಂದಿರುವ ವಸತಿ ಕಟ್ಟಡಗಳ ತೆರಿಗೆ ಕೊಂಚ ಕಡಿಮೆಯಾಗಲಿದೆ.

ಪ್ರತಿ ಚದರ ಮೀಟರ್ ಗೆ 40,000 ರೂ.ಗಿಂತ ಹೆಚ್ಚು ಸ್ಥಿರಾಸ್ತಿ ಮಾರ್ಗಸೂಚಿ ದರ ಹೊಂದಿರುವ ವಸತಿಯೇತರ ಮತ್ತು ವಾಣಿಜ್ಯೇತರ ಕಟ್ಟಡಗಳ ತೆರಿಗೆ ಏರಿಕೆಯಾಗಲಿದೆ ಎಂದು ಹೇಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read