ಬೆಂಗಳೂರು: ಒಳಮೀಸಲಾತಿ ಸಮೀಕ್ಷೆ ವೇಳೆ ಕರ್ತವ್ಯಲೋಪ ಆರೋಪದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ಮತ್ತಿಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.
ಮತ್ತಿಕೆರೆ ವಿಭಾಗದ ಮೌಲ್ಯಮಾಪಕ ರಾಮಾಂಜನೇಯಲು ಹಾಗೂ ಗೋವಿಂದರಾಜನಗರ ಕಂದಾಯ ಮೌಲ್ಯಮಾಪಕ ಹನುಮಂತರಾಜು ಅಮಾನತುಗೊಂಡ ಅಧಿಕಾರಿಗಳು.
ಮನೆ ಮನೆಗೆ ಸ್ಟಿಕ್ಕರ್ ಅಂಟಿಸುವ ವೇಳೆ ಕರ್ತವ್ಯಲೋಪ ಹಿನ್ನೆಲೆಯಲ್ಲಿ ಇಬ್ಬರು ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಲಾಗಿದೆ. ಈ ಮೂಲಕ ಈವರೆಗೆ 6 ನೌಕರರನ್ನು ಅಮಾನತುಗೊಳಿಸಿ ಬಿಬಿಎಂಪಿ ಆದೇಶ ಹೊರಡಿಸಿದೆ.