ಬೆಂಗಳೂರು : ” ಕೊಡವ ಸಮುದಾಯದಿಂದ ಇಂಡಸ್ಟ್ರಿಗೆ ಯಾರೂ ಬಂದಿಲ್ಲ, ಕೊಡವ ಸಮುದಾಯದಿಂದ ಇಂಡಸ್ಟ್ರಿಗೆ ನಾನೇ ಮೊದಲು ಬಂದಿದ್ದು ” ಎಂದು ಹೇಳುವ ಮೂಲಕ ಕಿರಿಕ್ ಬೆಡಗಿ, ನಟಿ ರಶ್ಮಿಕಾ ಮಂದಣ್ಣ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾರೆ.
ಸಂದರ್ಶನದಲ್ಲಿ ಮಾತನಾಡಿದ ನಟಿ ರಶ್ಮಿಕಾ ಮಂದಣ್ಣ ‘ ಕೊಡವ ಸಮುದಾಯ ನನ್ನನ್ನೇ ಗುರುತಿಸಿದೆ, ಕೊಡವ ಸಮುದಾಯದಿಂದ ಇಂಡಸ್ಟ್ರಿಗೆ ಯಾರೂ ಬಂದಿಲ್ಲ, ನಾನೇ ಮೊದಲು ಬಂದಿದ್ದು ಎಂದು ಹೇಳಿದ್ದಾರೆ.
ನಟಿ ಪ್ರೇಮಾ, ನಿಧಿ ಸುಬ್ಬಯ್ಯ, ಶುಭ್ರ ಅಯ್ಯಪ್ಪ, ಹರ್ಷಿಕಾ ಪೂಣಚ್ಚ, ಸೇರಿದಂತೆ ಹಲವರು ಕೊಡವ ಸಮುದಾಯದಿಂದ ಬಂದ ಸ್ಟಾರ್ ನಟಿಯಾಗಿದ್ದಾರೆ. ಆದರೆ ಇದೆನ್ನೆಲ್ಲಾ ಮರೆತು ರಶ್ಮಿಕಾ ಮಂದಣ್ಣ ಹೇಳಿಕೆ ನೀಡಿದ್ದು, ಟೀಕೆಗೆ ಗುರಿಯಾಗಿದೆ.
ಈ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ ಹುಟ್ಟು ಹಾಕಿದೆ. ನಟಿ ಪ್ರೇಮ ಕೊಡವ ಸಮುದಾಯದಿಂದ ಬಂದ ನಟಿಯಾಗಿದ್ದು, ಹಲವು ಸ್ಯಾಂಡಲ್ ವುಡ್ ನಟರ ಜೊತೆ ನಟಿಸಿ ಸ್ಟಾರ್ ನಟಿಯಾಗಿ ಮೆರೆದಿದ್ದಾರೆ.
ಯಜಮಾನ, ಓಂ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿ ಸೈ ಎನಿಸಿಕೊಂಡ ಪ್ರೇಮಾ ಬಗ್ಗೆ ರಶ್ಮಿಕಾಗೆ ಗೊತ್ತಿಲ್ವಾ..? ಎಂದು ನೆಟ್ಟಿಗರು ಕಿಡಿಕಾರಿದ್ದಾರೆ. ಅದೇನೆ ಇರಲಿ ಗೊತ್ತಿದ್ದೋ..ಗೊತ್ತಿಲ್ವೋ..ಮಾತಿನ ಭರದಲ್ಲಿ ಹೇಳಿಕೆ ನೀಡಿದ್ರೋ..ಏನೋ ಗೊತ್ತಿಲ್ಲ. ..ಕಿರಿಕ್ ಬೆಡಗಿ ರಶ್ಮಿಕಾ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ.