ಬಿಹಾರದ ಪಾಟ್ನಾದಲ್ಲಿ ಅವರ ಮಗ ಗುಂಜನ್ ಖೇಮ್ಕಾ ಅವರನ್ನು ಇದೇ ರೀತಿಯಾಗಿ ಹತ್ಯೆಗೈದ ಆರು ವರ್ಷಗಳ ನಂತರ, ಪ್ರಮುಖ ಉದ್ಯಮಿ ಗೋಪಾಲ್ ಖೇಮ್ಕಾ ಅವರನ್ನು ಬೈಕ್ನಲ್ಲಿ ಬಂದ ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ.ಬಿಹಾರ ಮೂಲದ ಉದ್ಯಮಿ ಹಾಗೂ ಬಿಜೆಪಿ ನಾಯಕ ಗೋಪಾಲ್ ಖೇಮ್ಕಾ ಅವರನ್ನ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ರಾಜ್ಯದ ಅತ್ಯಂತ ಹಳೆಯ ಖಾಸಗಿ ಆಸ್ಪತ್ರೆಗಳಲ್ಲಿ ಒಂದಾದ ಮಗಧ ಆಸ್ಪತ್ರೆಯ ಮಾಲೀಕ ಖೇಮ್ಕಾ ಶುಕ್ರವಾರ ರಾತ್ರಿ ಐಷಾರಾಮಿ ಗಾಂಧಿ ಮೈದಾನ ಪ್ರದೇಶದ ತಮ್ಮ ನಿವಾಸವಾದ ಪನಾಚೆ ಹೋಟೆಲ್ ಬಳಿಯ ಅಪಾರ್ಟ್ಮೆಂಟ್ ಬಳಿ ಕಾರಿನಿಂದ ಇಳಿಯುತ್ತಿದ್ದಂತೆಯೇ, ಅಪರಿಚಿತ ದುಷ್ಕರ್ಮಿಗಳು ಅವರ ಮೇಲೆ ಗುಂಡು ಹಾರಿಸಿದ್ದಾರೆ.
ಖೇಮ್ಕಾ ಅವರ ಸಹೋದರ ಶಂಕರ್ ಪ್ರಕಾರ ‘ ಗುಂಡಿನ ದಾಳಿ ನಡೆದ ಸುಮಾರು ಮೂರು ಗಂಟೆಗಳ ನಂತರ ಅಧಿಕಾರಿಗಳು ಸ್ಥಳಕ್ಕೆ ಬಂದರು ಎಂದು ಹೇಳಿದರು. ಅವರ ಪ್ರಕಾರ, ಬಂಕಿಪೋರ್ ಕ್ಲಬ್ನ ನಿರ್ದೇಶಕರೂ ಆಗಿದ್ದ ಅವರ ಸಹೋದರ ಮನೆಗೆ ಹಿಂತಿರುಗುತ್ತಿದ್ದರು. ರಾತ್ರಿ 11:40 ಕ್ಕೆ ಅವರು ಕಾರಿನಿಂದ ಇಳಿಯುತ್ತಿದ್ದಂತೆ, ದಾಳಿಕೋರರು ಅವರ ಮೇಲೆ ಗುಂಡು ಹಾರಿಸಿದರು. ಪೊಲೀಸರು ಸ್ಥಳಕ್ಕೆ ತಲುಪಿದ್ದು ಬೆಳಗಿನ ಜಾವ 2:30 ರವರೆಗೆ ಎಂದು ಶಂಕರ್ ಹೇಳಿದ್ದಾರೆ.
ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇರುವಾಗ, ಈ ಘಟನೆಯು ರಾಜಕೀಯ ಆಕ್ರೋಶವನ್ನು ಹುಟ್ಟುಹಾಕಿದೆ, ಸಂಸದ ಪಪ್ಪು ಯಾದವ್ ಅವರು ನಿತೀಶ್ ಕುಮಾರ್ ಸರ್ಕಾರದ ಉತ್ತಮ ಆಡಳಿತದ ಹೇಳಿಕೆಗಳನ್ನು ಪ್ರಶ್ನಿಸಿದ್ದಾರೆ. ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.
CCTV Footage Captures Chilling Moments of Bihar Businessman Gopal Khemka’s Murder in Patna
— Republic (@republic) July 5, 2025
Tune in to LIVE TV for all the fastest #BREAKING alerts – https://t.co/Vo3AasTr8P pic.twitter.com/pGQjfVIFVe