HomeLatest Newsಪ್ರಯಾಣಿಕರಿಗೆ ಗುಡ್ ನ್ಯೂಸ್: KSRTC ಬಸ್ ಟಿಕೆಟ್ ದರದ ರೌಂಡಪ್ ವ್ಯವಸ್ಥೆ ರದ್ದು

ಪ್ರಯಾಣಿಕರಿಗೆ ಗುಡ್ ನ್ಯೂಸ್: KSRTC ಬಸ್ ಟಿಕೆಟ್ ದರದ ರೌಂಡಪ್ ವ್ಯವಸ್ಥೆ ರದ್ದು

ಬೆಂಗಳೂರು: ಕೆಎಸ್ಆರ್ಟಿಸಿ ಬಸ್ ಗಳಲ್ಲಿ ಜಾರಿಯಲ್ಲಿದ್ದ ಟಿಕೆಟ್ ದರದ ರೌಂಡಪ್ ವ್ಯವಸ್ಥೆಯನ್ನು ರದ್ದುಗೊಳಿಸಲಾಗಿದೆ.

ಚಿಲ್ಲರೆ ಸಮಸ್ಯೆಯಿಂದಾಗಿ 2016 ರಿಂದ ಪ್ರಯಾಣದರವನ್ನು ರೌಂಡಪ್ ಮಾಡಿ ಹಣ ಸಂಗ್ರಹಿಸಲಾಗುತ್ತಿತ್ತು. ಈಗ ಟಿಕೆಟ್ ಕಾಯ್ದಿರಿಸುವ ಕೌಂಟರ್ ಗಳಲ್ಲಿನ ಪಿಒಎಸ್ ಯಂತ್ರಗಳು ಮತ್ತು ಇಟಿಎಂ ಯಂತ್ರಗಳಲ್ಲಿ ಯುಪಿಐ ವ್ಯವಸ್ಥೆ ಒದಗಿಸಲಾಗಿದೆ. ಇದರಿಂದ ಪ್ರಯಾಣ ದರವನ್ನು ರೌಂಡಪ್ ಮಾಡಿ ಸಂಗ್ರಹಿಸುವುದನ್ನು ರದ್ದು ಮಾಡಲಾಗಿದೆ.

ಈ ಮೊದಲು ಪ್ರಯಾಣದರ 101 ರೂ.ನಿಂದ 105 ರೂ.ವರೆಗೆ ಇದ್ದಲ್ಲಿ 100 ರೂಪಾಯಿ ಹಾಗೂ 106 ರಿಂದ 109 ರೂಪಾಯಿ ಇದ್ದಲ್ಲಿ 110 ರೂ. ಪಡೆಯಲಾಗುತ್ತಿತ್ತು. ಇನ್ನು ಮುಂದೆ ನಿಗದಿತ ನಿಖರ ಟಿಕೆಟ್ ದರವನ್ನೇ ಪಡೆಯಲಾಗುವುದು. ಕೆಎಸ್ಆರ್ಟಿಸಿಯ ಪ್ರತಿಷ್ಠಿತ 400 ಬಸ್ ಗಳಲ್ಲಿ ಜಾರಿಯಲ್ಲಿದ್ದ ಟಿಕೆಟ್ ರೌಂಡಪ್ ರದ್ದು ಮಾಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular