ಹಾಸನ: ಪತ್ನಿಯನ್ನು ಹತ್ಯೆಗೈದು ಹೃದಯಾಘಾತದಿಂದ ಸಾವು ಎಂದು ಪತಿ ಕಥೆಕಟ್ಟಿರುವ ಘಟನೆ ಹಾಸನ ಜಿಲ್ಲೆಯ ಗಬ್ಬಲಗೂಡು ಗ್ರಾಮದಲ್ಲಿ ನಡೆದಿದೆ.
ಹಾಸನ ಜಿಲ್ಲೆಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವ ಪ್ರಕರಣ ಹೆಚ್ಚುತ್ತಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಇಲ್ಲೋರ್ವ ವ್ಯಕ್ತಿ ಪತ್ನಿಯನ್ನು ಹತ್ಯೆಗೈದು ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ ಎಂದು ಕಥೆ ಕಟ್ಟಿದ್ದಾನೆ. ಹಾಸನ ಜಿಲ್ಲೆಯ ಗಬ್ಬಲಗೂಡು ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಶಾರದಾ ಕೊಲೆಯಾಗಿರುವ ಮಹಿಳೆ. ಪ್ರಸನ್ನ ಪತ್ನಿಯನ್ನೇ ಕೊಲೆಗೈದಿರುವ ಪತಿ. 7 ವರ್ಷಗಳ ಹಿಂದೆ ಶಾರದಾ ಹಾಗೂ ಪ್ರಸನ್ನ ಪ್ರೀತಿಸಿ ವಿವಾಹವಾಗಿದ್ದರು. ದಂಪತಿಗೆ ಮಗು ಕೂಡ ಇದೆ. ಬರಬರುತ್ತಾ ಪತಿ-ಪತ್ನಿ ನಡುವೆ ಜಗಳವಾಗುತ್ತಿತ್ತು. ಇದೀಗ ಪತಿ ಪ್ರಸನ್ನ, ಪತ್ನಿಯನ್ನೇ ಕೊಲೆ ಮಾಡಿದ್ದಾನೆ. ಬಳಿಕ ಹೃದಯಾಘಾತದಿಂದ ಪತ್ನಿ ಸಾವನ್ನಪ್ಪಿದ್ದಾಳೆ ಎಂದು ಹೇಳುತ್ತಿದ್ದಾನೆ ಎಂದು ಶಾರದಾ ಪೋಷಕರು ಆರೋಪಿಸಿದ್ದಾರೆ.
ಹಳೆಬೀಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಬಳಿಕ ಸತ್ಯಾಸತ್ಯತೆ ತಿಳಿಯಬೇಕಿದೆ.