ಬೀದರ್: ಅಪಘಾತದಲ್ಲಿ ಮಗ ಸಾವನ್ನಪ್ಪಿದ ಸುದ್ದಿ ಕೇಳಿ ಆಘಾತಕ್ಕೊಳಗಾದ ತಾಯಿ ಹೃದಯಾಘತಾದಿಂದ ಸಾವನ್ನಪ್ಪಿರುವ ಘಟನೆ ಬೀದರ್ ನಲ್ಲಿ ನಡೆದಿದೆ.
ಬೀದರ್ ತಾಲೂಕಿನ ಘೋಡಂಪಳ್ಳಿ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. ಲಕ್ಷ್ಮೀಕಾಂತ್ ಜೋಶಿ ಅಲಿಯಾಸ್ ಕಾಂತರಾಜು (45) ಹಾಗೂ ತಾಯಿ ಶಾರದಾಬಾಯಿ (86) ಮೃತರು. ಒಂದೇ ದಿನ ತಾಯಿ-ಮಗ ಇಬ್ಬರೂ ಇಹಲೋಕ ತ್ಯಜಿಸಿದ್ದಾರೆ.
ಘೋಡಂಪಳ್ಳಿ ರಸ್ತೆಯಲ್ಲಿ ಬೈಕ್ ಅಪಘಾತದಲ್ಲಿ ಮಗ ಕಾಂತರಾಜು ಸಾವನ್ನಪ್ಪಿದ್ದರು. ಈ ವಿಷಯ ತಿಳಿದ ತಾಯಿ ಶಾರದಾಬಾಯಿ ತೀವ್ರವಾಗಿ ನೊಂದಿದ್ದರು. ಮಗನ ಸಾವಿನ ಸುದ್ದಿ ಕೇಳಿ ಕೆಲವೇ ಸಮಯದಲ್ಲಿ ತಾಯಿ ಶಾರದಾಬಾಯಿ ಕೂಡ ಸಾವನ್ನಪ್ಪಿದ್ದಾರೆ. ಮನೆಯಲ್ಲಿ ಒಂದೇ ದಿನ ಇಬ್ಬರ ಅಗಲಿಕೆ ಕುಟುಂಬಕ್ಕೆ ಮತ್ತೊಂದು ಆಘಾತ ತಂದಿದೆ.