ಉತ್ತರ ಪ್ರದೇಶದ ಝಾನ್ಸಿ ನಗರದಲ್ಲಿ 29 ವರ್ಷದ ಪೂಜಾ ಜಾತವ್ ಎಸಗಿದ ಸರಣಿ ಅಪರಾಧಗಳು ನಗರವನ್ನೇ ಬೆಚ್ಚಿಬೀಳಿಸಿವೆ. ಪತಿಯನ್ನು ಕೊಲೆ ಮಾಡಿಸಿದ ಆರೋಪಕ್ಕೆ ಗುರಿಯಾಗಿರುವ ಆಕೆ, ನಂತರ ಆತನ ಇಬ್ಬರು ಸಹೋದರರೊಂದಿಗೆ ಲಿವ್-ಇನ್ ಸಂಬಂಧದಲ್ಲಿದ್ದು, ಕೊನೆಯದಾಗಿ ಆಸ್ತಿ ವಿವಾದಕ್ಕಾಗಿ ಅತ್ತೆಯ ಕೊಲೆಗೂ ಸಂಚು ರೂಪಿಸಿರುವುದು ಬೆಳಕಿಗೆ ಬಂದಿದೆ.
ವರದಿಗಳ ಪ್ರಕಾರ, ಪೂಜಾ ತನ್ನ ಪತಿಯ ಕೊಲೆಗೆ ಸಂಚು ರೂಪಿಸಿದ್ದಳು ಎನ್ನಲಾಗಿದೆ. ಪತಿಯ ಮರಣಾನಂತರ, ಆತನ ಕಿರಿಯ ಸಹೋದರ ಕಲ್ಯಾಣ್ ಸಿಂಗ್ ಜೊತೆ ಲಿವ್-ಇನ್ ಸಂಬಂಧ ಆರಂಭಿಸಿದ್ದಳು. ಕಲ್ಯಾಣ್ ಸಿಂಗ್ ಸಾವನ್ನಪ್ಪಿದ ನಂತರ, ಪೂಜಾ, ಪತಿಯ ಹಿರಿಯ ಸಹೋದರ ಸಂತೋಷ್ ಜೊತೆ ಸಂಬಂಧ ಬೆಳೆಸಿ, ಆತನಿಗೆ ಮಗುವನ್ನೂ ಸಹ ನೀಡಿದ್ದಾಳೆ.
ಈ ಮೋಸದ ಜಾಲ, ಆಸ್ತಿ ವಿಚಾರದಲ್ಲಿ ಪೂಜಾಳಿಗೆ ತನ್ನ 54 ವರ್ಷದ ಅತ್ತೆ ಸುಶೀಲಾ ದೇವಿ ಅವರಿಂದ ತೀವ್ರ ವಿರೋಧ ಎದುರಾದಾಗ ಮತ್ತಷ್ಟು ವಿಕೋಪಕ್ಕೆ ಹೋಗಿದೆ. ಜೂನ್ 24ರಂದು ಸುಶೀಲಾ ದೇವಿ ಅವರನ್ನು ಕೊಲೆ ಮಾಡಲು ಪೂಜಾ, ತನ್ನ ಸಹೋದರಿ ಮತ್ತು ಆಕೆಯ ಪ್ರಿಯಕರ ಅನಿಲ್ ವರ್ಮಾ ಜೊತೆ ಸೇರಿ ಸಂಚು ರೂಪಿಸಿದ್ದಳು ಎಂದು ಆರೋಪಿಸಲಾಗಿದೆ. ಬರ್ಬರ ಕೊಲೆಯ ನಂತರ, ಅವರು ₹8 ಲಕ್ಷ ಮೌಲ್ಯದ ಆಭರಣಗಳೊಂದಿಗೆ ಪರಾರಿಯಾಗಿದ್ದರು.
ಪೂಜಾ ಮತ್ತು ಆಕೆಯ ಸಹೋದರಿಯನ್ನು ಪೊಲೀಸರು ಈ ಹಿಂದೆ ಬಂಧಿಸಿದ್ದರು. ಈಗ, ತಲೆಮರೆಸಿಕೊಂಡಿದ್ದ ಅನಿಲ್ ವರ್ಮಾ ನನ್ನು ಪೊಲೀಸರು ಸೆರೆಹಿಡಿದಿದ್ದಾರೆ. ಆತನಿಂದ ಕಳವು ಮಾಡಿದ ವಸ್ತುಗಳು ಮತ್ತು ಆಯುಧವನ್ನು ವಶಪಡಿಸಿಕೊಳ್ಳಲಾಗಿದೆ. ಈ ಘಟನೆ ಝಾನ್ಸಿ ನಗರದಲ್ಲಿ ತೀವ್ರ ಆಘಾತವನ್ನುಂಟು ಮಾಡಿದ್ದು, ಆನ್ಲೈನ್ನಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
8 बीघा जमीन के लिए सास का मर्डर कराने वाली पूजा निकली शातिर.. पति की मौत के बाद देवर, फिर जेठ और अब प्रेमी का मिला साथ… देवर की चाहत में करा दी थी पति की हत्या
— TRUE STORY (@TrueStoryUP) July 2, 2025
UP के झाँसी में सास सुशीला देवी की हत्या कराने वाली बहू पूजा तो बहुत खतरनाक निकली। देवर कल्याण सिंह की चाहत में पति… pic.twitter.com/vAPM1tdbvU

 
			 
		 
		 
		 
		 Loading ...
 Loading ... 
		 
		