GOOD NEWS : ‘ರೈಲ್ವೇ ಇಲಾಖೆ’ಯಿಂದ ಮಸ್ತ್ ಆ್ಯಪ್ ‘RailOne’ ಬಿಡುಗಡೆ, ಇನ್ಮುಂದೆ ಒಂದೇ ಕಡೆ ಸಿಗಲಿದೆ ಈ ಎಲ್ಲಾ ಸೇವೆ |WATCH VIDEO

|ನವದೆಹಲಿ : ರೈಲ್ವೇ ಇಲಾಖೆ ಪ್ರಯಾಣಿಕರಿಗೆ ಮಸ್ತ್ ಆದ ಆ್ಯಪ್ ‘RailOne’ ಬಿಡುಗಡೆ ಮಾಡಿದೆ. ಇನ್ಮುಂದೆ ಒಂದೇ ಕಡೆ ಎಲ್ಲಾ ಸೇವೆ ನಿಮಗೆ ಸಿಗುತ್ತೆ.

ಹೌದು, ನೀವು ಕುಂತಲ್ಲೇ ರೈಲ್ವೇ ಟಿಕೆಟ್ ಬುಕಿಂಗ್, ಕ್ಯಾನ್ಸಲೇಶನ್, ರಿಸರ್ವೇಷನ್ ಎಲ್ಲವನ್ನೂ ಮಾಡಬಹುದು. ರೈಲ್ವೇ ಇಲಾಖೆ ಹೊಸ ಆ್ಯಪ್ ಬಿಡುಗಡೆ ಮಾಡಿದ್ದು, ಕೆಳಗೆ ನೀಡಿದ ವೀಡಿಯೋ ಮೂಲಕ ಹೆಚ್ಚಿನ ಮಾಹಿತಿ ಪಡೆಯಬಹುದು.

ಬಹು ಸೇವೆಗಳನ್ನು ಒಂದೇ ಕಡೆ ನೀಡುವ ಗುರಿಯೊಂದಿಗೆ ಈ ಅಪ್ಲಿಕೇಶನ್ ಹೊರತರಲಾಗಿದೆ. ಇದು ರೈಲು ಸ್ಥಿತಿ ಮತ್ತು ಪ್ರಯಾಣದ ಪ್ರತಿಕ್ರಿಯೆಯನ್ನು ಟ್ರ್ಯಾಕ್ ಮಾಡುತ್ತದೆ ಎಂದು ಮೂಲಗಳು ತಿಳಿಸಿವೆ. ಈ ಆ್ಯಪ್ ಆಂಡ್ರಾಯ್ಡ್ ಪ್ಲೇ ಸ್ಟೋರ್ ಮತ್ತು ಐಒಎಸ್ ಆಪ್ ಸ್ಟೋರ್ ನಲ್ಲಿ ಡೌನ್ ಲೋಡ್ ಮಾಡಲು ಲಭ್ಯವಿದೆ.

ಇದು ಬಳಕೆದಾರ ಸ್ನೇಹಿ ವ್ಯವಸ್ಥೆಯೊಂದಿಗೆ ಸಮಗ್ರ, ಆಲ್-ಇನ್-ಒನ್ ಅಪ್ಲಿಕೇಶನ್ ಆಗಿದೆ. ಆಂಡ್ರಾಯ್ಡ್ ಪ್ಲೇ ಸ್ಟೋರ್ ಮತ್ತು ಐಒಎಸ್ ಆಪ್ ಸ್ಟೋರ್ ನಲ್ಲಿ ಅಪ್ಲಿಕೇಶನ್ ಡೌನ್ ಲೋಡ್ ಮಾಡಲು ಮುಕ್ತವಾಗಿ ಲಭ್ಯವಿದೆ. ಇದು ಎಲ್ಲಾ ಪ್ರಯಾಣಿಕರ ಸೇವೆಗಳನ್ನು ಒಂದಡೆ ಸಂಯೋಜಿಸುತ್ತದೆ ಉದಾಹರಣೆಗೆ:

● 3% ರಿಯಾಯಿತಿಯೊಂದಿಗೆ ಕಾಯ್ದಿರಿಸದ ಮತ್ತು ಪ್ಲಾಟ್ಫಾರ್ಮ್ ಟಿಕೆಟ್ ಗಳು
● ಲೈವ್ ರೈಲು ಟ್ರ್ಯಾಕಿಂಗ್
● ಕುಂದುಕೊರತೆ ಪರಿಹಾರ
● ಇ-ಕೇಟರಿಂಗ್, ಪೋರ್ಟರ್ ಬುಕಿಂಗ್ ಮತ್ತು ಯಾತ್ರೆಯ ಕೊನೆಯ ಮೈಲು ತನಕದ ಟ್ಯಾಕ್ಸಿ ಸೇವೆ ಹೊಂದಿದೆ
* ಇದು ಪ್ರತಿ ನಿಮಿಷಕ್ಕೆ 1.5 ಲಕ್ಷ ಟಿಕೆಟ್ ಬುಕಿಂಗ್ ಮತ್ತು 40 ಲಕ್ಷ ವಿಚಾರಣೆಗಳನ್ನು ಮಾಡುವ ಸಾಮರ್ಥ್ಯ ಹೊಂದಿರುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read