ಬೆಂಗಳೂರು: ಕೊಲೆಯಾಗಿರುವ ನಿವೃತ್ತ ಡಿಜಿ & ಐಜಿಪಿ ಓಂಪ್ರಕಾಶ್ ಪುತ್ರಿ ಕೃತಿ ದಾಂದಲೆ ನಡೆಸಿರುವ ಘಟನೆ ಬೆಂಗಳೂರಿನ ಹೆಚ್.ಎಸ್.ಆರ್.ಲೇಔಟ್ ನಲ್ಲಿ ನಡೆದಿದೆ.
ಮನೆಯ ಬಳಿಯ ನಂದಿನಿ ಬೂತ್ ನಲ್ಲಿ ಗಲಾಟೆ ಮಾಡಿಕೊಂಡಿದ್ದು, ಅಂಗಡಿಯಲ್ಲಿದ್ದ ಗಾಅಜಿನ ಬಾಟಲ್ ಗಳನ್ನು ಒಡೆದು ದಾಂದಲೆ ನಡೆಸಿದ್ದಾಳೆ ಎಂದು ತಿಳಿದುಬಂದಿದೆ. ಸೋಮವಾರ ಸಂಜೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಓಂಪ್ರಕಾಶ್ ಪತ್ನಿ ಪಲ್ಲವಿ ಕೊಲೆ ಕೇಸ್ ನಲ್ಲಿ ಜೈಲುಪಾಲಾಗಿದ್ದಾರೆ. ಓಂಪ್ರಕಾಶ್ ಕೊಲೆ ಬಳಿಕ ಸಂಬಂಧಿಕರು, ಸ್ನೇಹಿತರು ದೂರಾಗಿದ್ದಾರೆ. ಮನೆಯಲ್ಲಿ ನಡೆದ ಘಟನೆ ಬಗ್ಗೆ ಕೇಳಿದ್ದಕ್ಕೆ ಕೆರಳಿ ಕೆಂಡವಾದ ಕೃತಿ ರಾದ್ಧಾಂತ ನಡೆಸಿದ್ದಾಳೆ. ಅಂಗಡಿಯಲ್ಲಿದ್ದ ಗಾಜಿನ ಬಟಲ್ ಗಳನ್ನು ಒಡೆದು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾಳೆ.
ಕೃತಿ ವರ್ತನೆಗೆ ಬೇಸತ್ತು ಅಂಗಡಿ ಮಾಲೀಕ ಹೆಚ್.ಎಸ್.ಆರ್ ಲೇಔಟ್ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಹೊಯ್ಸಳ ಪೊಲೀಸರು ಕೃತಿಯನ್ನು ಕರೆದೊಯ್ದಿದ್ದಾರೆ. ದೂರು ನೀಡಿದರೂ ಹೆಚ್.ಎಸ್.ಆರ್ ಲೇಔಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿಲ್ಲ ಎನ್ನಲಾಗಿದೆ.