ಮುಂಬೈ : ವಿದ್ಯಾರ್ಥಿಯೊರ್ವನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಮುಂಬೈನ ಪ್ರಸಿದ್ಧ ಶಾಲೆಯೊಂದರ ಮಹಿಳಾ ಶಿಕ್ಷಕಿಯನ್ನು ಪೋಕ್ಸೊ ಕಾಯ್ದೆಯಡಿಯಲ್ಲಿ ಬಂಧಿಸಲಾಗಿದೆ.
ಸಂತ್ರಸ್ತ ವಿದ್ಯಾರ್ಥಿ ಶಿಕ್ಷಕಿ ಬಗ್ಗೆ ತನ್ನ ಕುಟುಂಬಕ್ಕೆ ದೂರು ನೀಡಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ನಂತರ ವಿದ್ಯಾರ್ಥಿಯ ಕುಟುಂಬ ದೂರು ದಾಖಲಿಸಿದೆ.
ಶಾಲೆಯ ವಾರ್ಷಿಕ ಕಾರ್ಯಕ್ರಮಕ್ಕಾಗಿ ಡ್ಯಾನ್ಸ್ ಕಲಿಸುತ್ತಿದ್ದಾಗ ಆರೋಪಿ ಮಹಿಳಾ ಶಿಕ್ಷಕಿ ಸಂತ್ರಸ್ತ ಬಾಲಕನ ಸಂಪರ್ಕಕ್ಕೆ ಬಂದಳು. ಶಿಕ್ಷಕಿ ಬಾಲಕನನ್ನು ಮುಂಬೈನ ವಿವಿಧ ಹೋಟೆಲ್ಗಳಿಗೆ ಕರೆದುಕೊಂಡು ಹೋಗಿದ್ದಾಳೆ ಎಂದು ಮೂಲಗಳು ವರದಿ ಮಾಡಿವೆ.
ವರದಿಯ ಪ್ರಕಾರ ಒಂದು ವರ್ಷಕ್ಕೂ ಹೆಚ್ಚು ಕಾಲ ದೌರ್ಜನ್ಯ ನಡೆದಿದ್ದು, ಶಿಕ್ಷಕಿ ಡಿಸೆಂಬರ್ 2023 ರಲ್ಲಿ ವಿದ್ಯಾರ್ಥಿಯೊಂದಿಗೆ ಸಂಪರ್ಕಕ್ಕೆ ಬಂದಿದ್ದು ಮತ್ತು ಜನವರಿ 2024 ರಲ್ಲಿ ತನ್ನ ಮೊದಲ ಬಾರಿ ಈ ಕೃತ್ಯ ಎಸಗಿದ್ದಾಳೆ ಎನ್ನಲಾಗಿದೆ. ಪೋಷಕರು ತಮ್ಮ ಮಗನ ವರ್ತನೆಯಲ್ಲಿ ಬದಲಾವಣೆಯನ್ನು ಗಮನಿಸಲು ಪ್ರಾರಂಭಿಸಿದ್ದರು, ನಂತರ ಘಟನೆ ಬೆಳಕಿಗೆ ಬಂದಿದೆ. . 40 ವರ್ಷದ ಆರೋಪಿ ಶಿಕ್ಷಕಿ ವಿವಾಹಿತರಾಗಿದ್ದು, ಮಕ್ಕಳಿದ್ದಾರೆ ಮತ್ತು ಮುಂಬೈನ ಎಲೈಟ್ ಶಾಲೆಯಲ್ಲಿ ಇಂಗ್ಲಿಷ್ ಭಾಷೆ ಭೋಧಿಸುತ್ತಿದ್ದಳು.