ಬೆಂಗಳೂರು : ಬೆಂಗಳೂರಿಗರಿಗೆ ಮತ್ತೊಂದು ಶಾಕ್ ಎದುರಾಗಿದ್ದು, ಶೀಘ್ರವೇ ಆಟೋ ಮೀಟರ್ ದರ ಏರಿಕೆಯಾಗುವುದು ಫಿಕ್ಸ್ ಆಗಿದೆ ಎನ್ನಲಾಗಿದೆ.
ಆಟೋ ಮಿನಿಮಮ್ ದರ 30 ರಿಂದ 36 ರೂ ಹೆಚ್ಚಳವಾಗುವ ಸಾಧ್ಯತೆಯಿದ್ದು, ಪ್ರತಿಕಿಮೀಗೆ 18 ರೂ ಹೆಚ್ಚಳವಾಗುವ ಸಾಧ್ಯತೆಯಿದೆ. ದರ ಏರಿಸಲು ಜಿಲ್ಲಾಡಳಿತ ಕೂಡ ಗ್ರೀನ್ ಸಿಗ್ನಲ್ ನೀಡಿದ್ದು, ಸರ್ಕಾರದ ಆದೇಶವೊಂದೇ ಬಾಕಿಯಿದೆ.
ಆಟೋ ದರ ಏರಿಕೆ ಮಾಡುವಂತೆ ಕಳೆದ ಮೂರು ವರ್ಷಗಳಿಂದ ಆಟೋ ಸಂಘಟನೆಗಳು ಹೋರಾಟ ನಡೆಸುತ್ತಿವೆ., ಒಂದು ವೇಳೆ ದರ ಪರಿಷ್ಕರಣೆ ಮಾಡಿದಲ್ಲಿ ಮಿನಿಮಮ್ ಚಾರ್ಜ್ 36 ರೂ. ಆಗಲಿದೆ. ಆನಂತರ ಪ್ರತಿ ಕಿಲೋಮಿಟರ್ ದರ 18 ರೂ.ನಷ್ಟು ಹೆಚ್ಚಳವಾಗಲಿದೆ. ಪ್ರಸ್ತುತ ಮಿನಿಮಮ್ ಚಾರ್ಜ್ 30 ರೂಪಾಯಿ ಇದ್ದು, ನಂತರದ ಪ್ರತಿ ಕಿಲೋ ಮೀಟರ್ ಗೆ 15 ರೂಪಾಯಿ ದರ ನಿಗದಿಪಡಿಸಲಾಗಿದೆ.
56 ಆಟೋ ಸೀಜ್
ಬೆಂಗಳೂರಿನಲ್ಲಿ ಪ್ರಯಾಣಿಕರಿಂದ ದುಪ್ಪಟ್ಟು ದರ ವಸೂಲಿ ಮಾಡಿದ ಹಿನ್ನೆಲೆ ಆರ್ ಟಿ ಒ ಅಧಿಕಾರಿಗಳು ಆಟೋ ಚಾಲಕರಿಗೆ ಬಿಗ್ ಶಾಕ್ ನೀಡಿದ್ದಾರೆ. ಕಾರ್ಯಾಚರಣೆ ನಡೆಸಿ 56 ಆಟೋ ಸೀಜ್ ಮಾಡಿ ಸುಮಾರು 183 ಕೇಸ್ ದಾಖಲಿಸಿದ್ದಾರೆ.
ಪ್ರಯಾಣಿಕರಿಂದ ದುಪ್ಪಟ್ಟು ದರ ವಸೂಲಿ ಮಾಡುತ್ತಿದ್ದ ಆಟೋಗಳನ್ನು ಮಂಗಳವಾರ ಆರ್ ಟಿ ಒ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಆಟೋ ಚಾಲಕರು ಮನಬಂದಂತೆ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದ ಹಿನ್ನೆಲೆ ಕಾರ್ಯಾಚರಣೆ ನಡೆಸಿದ್ದಾರೆ.