ಹಾಸನ : ಹಾಸನದಲ್ಲಿ ಹೃದಯಾಘಾತ ಪ್ರಕರಣ ಹೆಚ್ಚಳವಾಗುತ್ತಿದ್ದು, ಮೈಸೂರಿನ ಜಯದೇವ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಏರಿಕೆಯಾಗಿದೆ.
ಹೌದು, ಮೈಸೂರಿನ ಜಯದೇವ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಹೆಚ್ಚಳವಾಗಿದ್ದು, 750 ರ ಸಂಖ್ಯೆಯಲ್ಲಿದ್ದ ರೋಗಿಗಳ ಸಂಖ್ಯೆ 1000 ಕ್ಕೆ ಹೆಚ್ಚಳವಾಗಿದೆ. ಈ ಆಸ್ಪತ್ರೆಗೆ ಬರುವ ರೋಗಿಗಳಲ್ಲಿ ( ಹಾರ್ಟ್ ಪೇಶೆಂಟ್) ಹಾಸನದವರೇ ಹೆಚ್ಚು ಎಂದು ಹೇಳಲಾಗಿದೆ. ಹಾಸನ ಜಿಲ್ಲೆಯಲ್ಲಿ ಹೃದಯಾಘಾತಕ್ಕೆ ಇದುವರೆಗೆ 24 ಮಂದಿ ಬಲಿಯಾಗಿದ್ದಾರೆ .
ಗಮನಿಸಿ : ಒತ್ತಡದ ಬದುಕಿನ ನಡುವೆಯೂ ಆರೋಗ್ಯಕರ ಜೀವನಶೈಲಿ ನಿಮ್ಮದಾಗಿಸಿಕೊಳ್ಳುವ ಮೂಲಕ ನಿಮ್ಮ ಹೃದಯದ ಕಾಳಜಿ ವಹಿಸಿ . ಎದೆನೋವು ಬಂದಾಗ ವೈದ್ಯರ ಸಲಹೆಯಿಲ್ಲದೆ ಯಾವುದೇ ಔಷಧಿಗಳನ್ನು ತೆಗೆದುಕೊಳ್ಳಬೇಡಿ. ಎದೆನೋವು ಅಥವಾ ಹೃದಯಾಘಾತಕ್ಕೆ ಸಂಬಂಧಿಸಿ ಯಾವುದೇ ಲಕ್ಷಣಗಳು ಕ೦ಡುಬ೦ದಲ್ಲಿ ತಕ್ಷಣವೇ ನಿಮ್ಮ ಕುಟುಂಬದವರಿಗೆ ಅಥವಾ ಸ್ನೇಹಿತರಿಗೆ ತಿಳಿಸಿ.
You Might Also Like
TAGGED:ಹೃದಯಾಘಾತ