ಹೈದರಾಬಾದ್: ತೆಲಂಗಾಣ ರಾಸಾಯನಿಕ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಮಂಗಳವಾರ ಸಾವನ್ನಪ್ಪಿದವರ ಸಂಖ್ಯೆ 34 ಕ್ಕೆ ಏರಿದೆ.
ಆರಂಭದಲ್ಲಿ 12 ಜನ ಸಾವನ್ನಪ್ಪಿದ್ದರು. ಅವಶೇಷಗಳನ್ನು ತೆಗೆದುಹಾಕುವಾಗ ಹಲವಾರು ಶವಗಳು ಅವಶೇಷಗಳ ಅಡಿಯಲ್ಲಿ ಪತ್ತೆಯಾಗಿವೆ. 31 ಶವಗಳನ್ನು ಅವಶೇಷಗಳಿಂದ ಹೊರತೆಗೆಯಲಾಗಿದೆ ಮತ್ತು ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಸಾವನ್ನಪ್ಪಿದ್ದಾರೆ. ರಕ್ಷಣಾ ಕಾರ್ಯಾಚರಣೆಯ ಕೊನೆಯ ಹಂತ ಇನ್ನೂ ಮುಂದುವರೆದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರಿತೋಷ್ ಪಂಕಜ್ ತಿಳಿಸಿದ್ದಾರೆ.
ಇದಲ್ಲದೆ, ಮುಖ್ಯಮಂತ್ರಿ ರೇವಂತ್ ರೆಡ್ಡಿ ಮಂಗಳವಾರ ಬೆಳಿಗ್ಗೆ ಅಪಘಾತ ಸ್ಥಳಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ.
ಸೋಮವಾರ, ಪಾಶಮೈಲಾರಂನಲ್ಲಿರುವ ಸಿಗಾಚಿ ರಾಸಾಯನಿಕ ಸ್ಥಾವರದಲ್ಲಿ ಸ್ಫೋಟ ಮತ್ತು ಬೆಂಕಿಯನ್ನು ಉಂಟಾಗಿ ಅವಘಡ ಸಂಭವಿಸಿತ್ತು.
ಸ್ಫೋಟದ ಪರಿಣಾಮವಾಗಿ ಕೈಗಾರಿಕಾ ಶೆಡ್ ಸಂಪೂರ್ಣವಾಗಿ ನಾಶವಾಗಿದೆ. ಸ್ಫೋಟದ ತೀವ್ರತೆಗೆ ಕೆಲವು ಕಾರ್ಮಿಕರು ಗಾಳಿಯಲ್ಲಿ ಮೇಲಕ್ಕೆ ಎಸೆಯಲ್ಪಟ್ಟು ಸುಮಾರು 100 ಮೀಟರ್ ದೂರದಲ್ಲಿ ಕೆಳಗೆ ಬಿದ್ದಿದ್ದಾರೆ. ಸ್ಫೋಟದ ಕಾರಣವನ್ನು ಇನ್ನೂ ಖಚಿತಪಡಿಸಿಕೊಳ್ಳಲಾಗಿಲ್ಲವಾದರೂ, ಇದು ರಾಸಾಯನಿಕ ಕ್ರಿಯೆಯಿಂದ ಉಂಟಾಗಿದೆ ಎಂದು ಶಂಕಿಸಲಾಗಿದೆ.
Sangareddy, Telangana | The death toll in the Sigachi pharma industries explosion in Sangareddy rises to 34: Paritosh Pankaj, Sangareddy SP pic.twitter.com/GvUobXSJgG
— ANI (@ANI) July 1, 2025