HomeLatest NewsBREAKING : ಈ ಬಾರಿ ನಾನೇ ದಸರಾ ಉದ್ಘಾಟಿಸುತ್ತೇನೆ : ಆರ್.ಅಶೋಕ್ ಗೆ CM ಸಿದ್ದರಾಮಯ್ಯ...

BREAKING : ಈ ಬಾರಿ ನಾನೇ ದಸರಾ ಉದ್ಘಾಟಿಸುತ್ತೇನೆ : ಆರ್.ಅಶೋಕ್ ಗೆ CM ಸಿದ್ದರಾಮಯ್ಯ ತಿರುಗೇಟು

ಮೈಸೂರು: ಈ ಬಾರಿ ಹೊಸ ಮುಖ್ಯಮಂತ್ರಿ ದಸರಾ ಉದ್ಘಾಟನೆ ಮಾಡಲಿದ್ದಾರೆ. ಸಿಎಂ ಸಿದ್ದರಾಮಯ್ಯ ಬದಲಾವಣೆ ಖಚಿತ ಎಂದಿದ್ದ ವಿಪಕ್ಷ ನಾಯಕ ಆರ್.ಅಶೋಕ್ ಹೇಳಿಕೆಗೆ ಸಿಎಂ ತಿರುಗೇಟು ನೀಡಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಾನೇ ಮುಖ್ಯಮಂತ್ರಿಯಾಗಿರುತ್ತೇನೆ. ನಾನೇ ದಸರಾವನ್ನೂ ಉದ್ಘಾಟನೆ ಮಾಡುತ್ತೇನೆ ಎಂದು ನಿಮಗೆ ಅನ್ನಿಸಲ್ವಾ? ಅದೇ ಸತ್ಯ. ನಾನೇ ದಸರಾ ಉದ್ಘಾಟಿಸುತ್ತೇನೆ ಎಂದಿದ್ದಾರೆ.

ಬಿಜೆಪಿ ನಾಯಕರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ನಾನು ಡಿಸಿಎಂ ಡಿ.ಕೆ.ಶಿವಕುಮಾರ್ ಇಬ್ಬರೂ ಚನ್ನಾಗಿಯೇ ಇದ್ದೇವೆ. ಮುಂದೆಯೂ ಚೆನ್ನಾಗಿಯೇ ಇರುತ್ತೇವೆ ಎಂದು ಹೇಳುತ್ತಾ ಡಿ.ಕೆ.ಶಿವಕುಮ್ನಾರ್ ಅವರ ಕೈ ಎತ್ತಿದರು. ಇಬ್ಬರೂ ಸಂತೋಷದಿಂದಲೇ ಮುಗುಳ್ನಗುತ್ತ ಒಗ್ಗಟ್ಟು ಪ್ರದರ್ಶಿಸಿದ ಪ್ರಸಂಗ ನಡೆಯಿತು. ನಾವೆಲ್ಲರೂ ಬಂಡೆಯಂತೆ ಒಗ್ಗಟ್ಟಿನಲ್ಲಿದೇವೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇನ್ನು ಸಿಎಂ ಬದಲಾವಣೆ ಬಗ್ಗೆ ಮಾಜಿ ಸಚಿವ ಶ್ರೀರಾಮುಲು ಹೇಳಿಕೆಯಲ್ಲಿ ಹುರುಳಿಲ್ಲ. ನಮ್ಮ ಬಗ್ಗೆ ಮಾತನಾಡಲು ಶ್ರೀರಾಮುಲು ಎಷ್ಟು ಸಲ ಸೋತಿಲ್ಲ? ಆಗ ಅವರಿಗೆ ಅವರ ಭವಿಷ್ಯ ಗೊತ್ತಿರಲಿಲ್ಲವೇ? ನಮ್ಮ ಸರ್ಕಾರ ಬಂಡೆ ರೀತಿ 5 ವರ್ಷ ಇರುತ್ತದೆ. ನಾನು, ಡಿ.ಕೆ.ಶಿವಕುಮಾರ್ ಚನ್ನಾಗಿಯೇ ಇದ್ದೇವೆ. ಒಗ್ಗಟ್ಟಿನಲ್ಲಿಯೇ ಇದ್ದೇವೆ. ಯಾರು ತಂದು ಹಾಕಿದರೂ ನಾವು ಯಾರ ಮಾತು ಕೇಳಲ್ಲ ಎಂದು ಹೇಳಿದರು.

For Latest News Updates, Join Our Whatsapp Community🚩
RELATED ARTICLES

Most Popular