HomeLatest NewsBREAKING: ಚೇರ್ ಮೇಲೆ ಕುಳಿತಿದ್ದಲ್ಲೇ ಹೃದಯಾಘಾತ: ಸೆಕ್ಯೂರಿಟಿ ಗಾರ್ಡ್ ಸಾವು!

BREAKING: ಚೇರ್ ಮೇಲೆ ಕುಳಿತಿದ್ದಲ್ಲೇ ಹೃದಯಾಘಾತ: ಸೆಕ್ಯೂರಿಟಿ ಗಾರ್ಡ್ ಸಾವು!

ಚಿಕ್ಕಮಗಳೂರು: ಚೇರ್ ಮೇಲೆ ಕುಳಿತಿದ್ದಾಗಲೇ ಹೃದಯಾಘಾತದಿಂದ ಕುಸಿದುಬಿದ್ದು ಸೆಕ್ಯೂರಿಟಿ ಗಾರ್ಡ್ ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ನಗರದ ಸಾತ್ವಿಕ್ ಟಿವಿಎಸ್ ಶೋ ರೂಂ ನಲ್ಲಿ ನಡೆದಿದೆ.

ಶಿವಾನಂದ್ (55) ಹೃದಯಾಘಾತದಿಂದ ಸಾವನ್ನಪ್ಪಿದ ಸೆಕ್ಯೂರಿಟಿ ಗಾರ್ಡ್. ಹಿರೇಗೌಜ ಗ್ರಾಮದ ನಿವಾಸಿಯಾಗಿದ್ದ ಶಿವಾನಂದ್, 6 ತಿಂಗಳ ಹಿಂದಷ್ಟೇ ಸಾತ್ವಿಕ್ ಟಿವಿ ಎಸ್ ಶೋ ರೂಂ ನಲ್ಲಿ ಕೆಲಸಕ್ಕೆ ಸೇರಿದ್ದರು. ಸೆಕ್ಯೂರಿಟಿ ಗಾರ್ಡ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಎಂದಿನಂತೆ ಇಂದು ಕೆಲಸ ನಿರ್ವಹಿಸುತ್ತಿದ್ದ ವೇಳೆ ಸುಸ್ತಾದವರಂತೆ ಕಂಡುಬಂದು, ತಕ್ಷಣ ತಮ್ಮ ಚೇರ್ ಮೇಲೆ ಬಂದು ಕುಳಿತಿದ್ದಾರೆ. ಅಷ್ಟರಲ್ಲೇ ಕೆಳಗೆ ಕುಸಿದು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸೆಕ್ಯೂರಿಟಿ ಗಾರ್ಡ್ ಸಾವನ್ನಪ್ಪಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular