HomeLatest NewsGOOD NEWS : ಯಜಮಾನಿಯರಿಗೆ ಗುಡ್ ನ್ಯೂಸ್ : ಗೃಹಲಕ್ಷ್ಮಿ ಫಲಾನುಭವಿಗಳು ಸ್ವಸಹಾಯ ಗುಂಪುಗಳ ವ್ಯಾಪ್ತಿಗೆ.!

GOOD NEWS : ಯಜಮಾನಿಯರಿಗೆ ಗುಡ್ ನ್ಯೂಸ್ : ಗೃಹಲಕ್ಷ್ಮಿ ಫಲಾನುಭವಿಗಳು ಸ್ವಸಹಾಯ ಗುಂಪುಗಳ ವ್ಯಾಪ್ತಿಗೆ.!

ಗೃಹಲಕ್ಷ್ಮಿ ಯೋಜನೆಯ ಅರ್ಹ ಮಹಿಳಾ ಫಲಾನುಭವಿಗಳನ್ನು ಎಸ್.ಹೆಚ್.ಜಿ (ಸ್ವ ಸಹಾಯ ಗುಂಪು)ಗಳ ವ್ಯಾಪ್ತಿಗೆ ತಂದು ವಿಮಾ ಯೋಜನಗಳಾದ ಪಿ.ಎಂ.ಜೆ.ಜೆ.ವೈ (ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಜೀವನ್ ಬಿಮಾ ಯೋಜನೆ) ಪಿ.ಎಂ.ಎಸ್.ಬಿ.ವೈ (ಪ್ರಧಾನ ಮಂತ್ರಿ ಸುರಕ್ಷಾ ಬೀಮಾ ಯೋಜನೆ) ಹಾಗೂ ಎ.ಪಿ.ವೈ (ಅಟಲ್ ಪಿಂಚಣಿ ಯೋಜನೆ) ಅಡಿಯಲ್ಲಿ ನೊಂದಣಿ ಮಾಡಿಸಿಲಾಗುವುದು ಎಂದು ಚಿತ್ರದುರ್ಗ ಜಿ.ಪಂ.ಉಪಕಾರ್ಯದರ್ಶಿ ಡಾ.ರಂಗಸ್ವಾಮಿ ಹೇಳಿದರು.

ನಗರದ ಜಿ.ಪಂ. ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ನೇತೃತ್ವದಲ್ಲಿ ಆಯೋಜಿಸಲಾದ 2025-26ನೇ ಸಾಲಿನ ಡಿ.ಎಲ್.ಆರ್.ಸಿ (ಜಿಲ್ಲಾ ಹಂತದ ಪುನರ್ ಪರಿಶೀಲನಾ ಸಮಿತಿ) ಹಾಗೂ ಡಿಸಿಸಿ (ಜಿಲ್ಲಾ ಸಲಹಾ ಸಮಿತಿ) ತ್ರೆöÊಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸ್ವ-ಸಹಾಯ ಗುಂಪುಗಳ ಮೂಲಕ ಮಹಿಳೆಯರು ಸಣ್ಣ ಉದ್ದಿಮೆಗಳನ್ನು ಸ್ಥಾಪಿಸಲು ಸಹಾಯ ಧನ ಹಾಗೂ ಸಬ್ಸಿಡಿ ನೀಡಲಾಗುತ್ತಿದೆ. ಎನ್.ಆರ್.ಎಲ್.ಎಂ (ರಾಷ್ಟಿçÃಯ ಗ್ರಾಮೀಣ ಜೀವನೋಪಾಯ ಯೋಜನೆ) ಅಡಿ ಎಸ್.ಹೆಚ್.ಜಿ ಗುಂಪುಗಳಿಗೆ ಸಾಲ ಸೌಲಭ್ಯ ನೀಡಲಾಗುತ್ತಿದೆ. ಈ ಗುಂಪುಗಳನ್ನು ಬ್ಯಾಂಕ್ಗಳೊAದಿಗೆ ಜೋಡಿಸಿ, ಆರ್ಥಿಕ ವ್ಯವಹಾರಗಳಲ್ಲಿ ಪಾಲ್ಗೊಳ್ಳುವಂತೆ ಮಾಡಲು, ಮಹಿಳೆಯರ ಆರ್ಥಿಕ ಸಾಕ್ಷರತೆಯನ್ನು ಹೆಚ್ಚಿಸುವ ದೃಷ್ಟಿಯಿಂದ 184 ಬ್ಯಾಂಕ್ ಸಖಿಯರಿಗೆ ತರಬೇತಿ ನೀಡಲಾಗಿದೆ. ಸದ್ಯ 10 ಬ್ಯಾಂಕ್ ಸಖಿಯರನ್ನು ನೇಮಕ ಮಾಡಿಕೊಳ್ಳಲಾಗಿದೆ. ಮುಂದಿನ ಹಂತದಲ್ಲಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಬ್ಯಾಂಕ್ಗಳಿಗೆ ಬ್ಯಾಂಕ್ ಸಖಿಯರನ್ನು ನೇಮಿಸಲಾಗುವುದು ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೈಕ್ರೋ ಫೈನಾನ್ಸ್ಗಳಲ್ಲಿ ಮಹಿಳೆಯರು ಹೆಚ್ಚಿನ ಬಡ್ಡಿಗೆ ಸಾಲ ಪಡೆಯುವ ಬದಲು, ಎಸ್.ಹೆಚ್.ಜಿ ಮೂಲಕ ಸಾಲ ಪಡೆದು ಉದ್ದಿಮೆ ನಡೆಸಿ ಆರ್ಥಿಕವಾಗಿ ಸಬಲರಾಗಲು ಅವಕಾಶವಿದೆ. ಜಿಲ್ಲೆಯಲ್ಲಿ 13 ಸಾವಿರಕ್ಕೂ ಅಧಿಕ ಎಸ್.ಹೆಚ್.ಜಿ ಗಳಿದ್ದು, ಕೇವಲ 144 ಎಸ್.ಹೆಚ್.ಜಿ ಗಳು ಬ್ಯಾಂಕ್ಗಳಿಗೆ ಸಾಲ ಮರುಪಾವತಿ ಮಾಡದೇ ಅನುತ್ಪಾದಕ ಎನಿಸಿವೆ. ಈ ಪ್ರಮಾಣ ಬೇರೆ ಸಾಲ ವ್ಯವಹಾರಗಳಿಗೆ ಹೋಲಿಸಿದರೆ ನಗಣ್ಯ ಎನಿಸುವಷ್ಟಿದೆ. ಸಾಲ ಪಡೆದ ಎಲ್ಲ ಎಸ್.ಹೆಚ್.ಜಿಗಳು ಪ್ರಾಮಾಣಿಕವಾಗಿ ಸಾಲ ಮರು ಪಾವತಿ ಮಾಡಿವೆ. ಎನ್.ಆರ್.ಎಲ್.ಎಂ ಮೂಲಕ ಅನುತ್ಪಾದಕ ಎನಿಸಿದ 144 ಎಸ್.ಹೆಚ್.ಜಿಗಳನ್ನು ಪುನಃ ಕ್ರೀಯಾಶೀಲವಾಗಿಸಿ ಬ್ಯಾಂಕುಗಳ ಸಾಲ ಮರುಪಾತಿಗೆ ಪ್ರಯತ್ನಿಸಲಾಗುವುದು ಎಂದು ಡಾ.ರಂಗಸ್ವಾಮಿ ಹೇಳಿದರು.

2024-25ನೇ ಸಾಲಿನಲ್ಲಿ 2,423 ಎಸ್.ಹೆಚ್.ಜಿ ಗಳಿಗೆ ಸಾಲ ಸೌಲಭ್ಯ ನೀಡಿ, ಶೇ.100 ರಷ್ಟು ಗುರಿ ಸಾಧಿಸಲಾಗಿದೆ. 2025-26ನೇ ಸಾಲಿಗೆ 6,766 ಎಸ್.ಹೆಚ್.ಜಿ ಗಳಿಗೆ ಸಾಲ ಸೌಲಭ್ಯದ ಗುರಿ ನಿಗದಿ ಪಡಿಸಲಾಗಿದೆ. ಈ ಪೈಕಿ 225 ಎಸ್.ಹೆಚ್.ಜಿ ಗಳಿಗೆ ಈಗಾಗಲೇ ಸಾಲ ಸೌಲಭ್ಯ ನೀಡಲಾಗಿದೆ. ಎಸ್.ಹೆಚ್.ಜಿ ಎಲ್ಲಾ ಸದಸ್ಯರ ಆಧಾರ್ ಹಾಗೂ ಇತರೆ ವಿವರಗಳನ್ನು ಸಂಗ್ರಹಿಸಿ ಎನ್.ಆರ್.ಎಲ್.ಎಂ ಎಂ.ಐ.ಎಸ್ ವೆಬ್ ಸೈಟ್ನಲ್ಲಿ ಅಳವಡಿಸಲಾಗಿದ್ದು, ಬ್ಯಾಂಕುಗಳು ಈ ಮಾಹಿತಿಯನ್ನು ಪಡೆದು ನಿರಾತಂಕವಾಗಿ ಸಾಲ ಸೌಲಭ್ಯ ಮಂಜೂರು ಮಾಡಬಹುದಾಗಿದೆ ಎಂದು ಜಿ.ಪಂ. ಕಾರ್ಯಕ್ರಮ ಅನುಷ್ಠಾನಾಧಿಕಾರಿ ಯೋಗೀಶ್ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ 16,59,456 ಜನಸಂಖ್ಯೆಯಿದ್ದು, ಪಿ.ಎಂ.ಜೆ.ಜೆ.ವೈ ಅಡಿ 2,05,924 ಪಿ.ಎಂ.ಎಸ್.ಬಿ.ವೈ ಅಡಿ 4,99,155 ಹಾಗೂ ಎ.ಪಿ.ವೈ ಅಡಿ 1,14,161 ಫಲಾನುಭವಿಗಳು ನೊಂದಣಿಯಾಗಿದ್ದಾರೆ. ಇನ್ನೂ ಸಾಕಷ್ಟು ಜನರನ್ನು ನೊಂದಣಿ ಮಾಡಲು ಅವಕಾಶವಿದೆ. ಆರ್ಥಿಕತೆ ಒಳಗೊಳ್ಳುವಿಕೆ ಮಟ್ಟ ಹೆಚ್ಚಿಸಲು ಜುಲೈ 1 ರಿಂದ ಸೆಪ್ಟಂಬರ್ 30 ವರೆಗೆ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ವತಿಯಿಂದ ಆಂದೋಲನ ಹಮ್ಮಿಕೊಳ್ಳಲಾಗಿದೆ. ಸ್ಥಳೀಯ ಗ್ರಾಮ ಪಂಚಾಯಿತಿಗಳ ಸಹಯೋಗದೊಂದಿಗೆ ಈ ವಿಮಾ ಯೋಜನೆಗಳ ನೊಂದಣಿ ಹೆಚ್ಚಿನ ಶ್ರಮ ವಹಿಸಬೇಕು. ಬ್ಯಾಂಕುಗಳು ಯಾವುದೇ ಕಾರಣಕ್ಕೂ ಸಾಮಾಜಿಕ ಭದ್ರತಾ ಯೋಜನೆಯಡಿ ಫಲಾನುಭವಿಗಳ ಖಾತೆ ಜಮೆಯಾಗುವ ಹಣವನ್ನು ಸಾಲದ ಕಂತಿಗೆ ವಜಾ ಮಾಡಿಕೊಳ್ಳಬಾರದು. ಕೃಷಿ, ಶಿಕ್ಷಣ, ವಸತಿ, ಸಣ್ಣ ಹಾಗೂ ಅತಿಸಣ್ಣ ಉದ್ದಿಮೆ ಹಾಗೂ ಇತರೆ ಸರ್ಕಾರದ ಯೋಜನೆಗಳಿಡಿ ಸಬ್ಸಡಿಯೊಂದಿಗೆ ಹೆಚ್ಚು ಸಾಲ ಸೌಲಭ್ಯಗಳನ್ನು ನೀಡಲು ವಿಳಂಬ ಮಾಡಬಾರದು ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕ ರಾಘವೇಂದ್ರ.ಎ ಮಾಹಿತಿ ನೀಡಿದರು.

ಆರ್.ಬಿ.ಐ. ಪ್ರಬಂಧಕ ಅರುಣ್ ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ 257 ಬ್ಯಾಂಕ್ ಶಾಖೆಗಳು ಕಾರ್ಯನಿರ್ವಹಿಸುತ್ತಿದ್ದು, ರೂ.11,193.42 ಕೋಟಿ ಠೇವಣಿ ಸ್ವೀಕರಿಸಲಾಗಿದ್ದು, ಬ್ಯಾಂಕುಗಳು ರೂ.12,596.51 ಕೋಟಿ ಸಾಲವನ್ನು ಸಾರ್ವಜನಿಕರಿಗೆ ನೀಡಿವೆ. ಜಿಲ್ಲೆಯ ಸಾಲ-ಠೇವಣಿ ಅನುಪಾತ ಪ್ರತಿಶತ 112.53% ಇದೆ. ಬ್ಯಾಂಕುಗಳು ಸರ್ಕಾರ ಹಾಗೂ ನಿಗಮ ಮಂಡಳಿಗಳ ಸಾಲ ಸೌಲಭ್ಯ ಯೋಜನೆಗಳನ್ನು ಕಾಲಮಿತಿಯಲ್ಲಿ ಮಂಜೂರು ಮಾಡಬೇಕು ಎಂದರುಕೆನರಾ ಬ್ಯಾಂಕ್ ವಲಯ ಪ್ರಬಂಧಕಿ ಅನಿತಾ, ನಬಾರ್ಡ್ ಜಿಲ್ಲಾ ವ್ಯವಸ್ಥಾಪಕ ವಿನಂತ್.ಕೆ, ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕ್ ಪ್ರಬಂಧಕ ಜನಾರ್ಧನ್, ಸೇರಿದಂತೆ ವಿವಿಧ ಬ್ಯಾಂಕ್ಗಳ ಅಧಿಕಾರಿಗಳು ಉಪಸ್ಥಿತರಿದ್ದರು.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular