HomeLatest NewsSHOCKING NEWS: ಬ್ಲ್ಯಾಕ್ ಮ್ಯಾಜಿಕ್ ಗಾಗಿ ತಾನೇ ಸಾಕಿದ ನಾಯಿಗಳನ್ನು ಕೊಂದ ಮಹಿಳೆ!

SHOCKING NEWS: ಬ್ಲ್ಯಾಕ್ ಮ್ಯಾಜಿಕ್ ಗಾಗಿ ತಾನೇ ಸಾಕಿದ ನಾಯಿಗಳನ್ನು ಕೊಂದ ಮಹಿಳೆ!

ಬೆಂಗಳೂರು: ಬೆಂಗಳೂರಿನ ಕೆ.ಆರ್.ಪುರಂ ನಲ್ಲಿ ಬೀದಿನಾಯಿಗಳ ಸರಣಿ ಹತ್ಯೆ ಪ್ರಕರಣ ಬೆಳಕಿಗೆ ಬಂದಿತ್ತು. ಈ ಘಟನೆ ಬೆನ್ನಲ್ಲೇ ಬೆಂಗಳೂರಿನಲ್ಲಿ ಮತ್ತೊಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದ್ದು, ಮಹಿಳೆಯೊಬ್ಬರು ಬ್ಲ್ಯಾಕ್ ಮ್ಯಾಜಿಕ್ ಗಾಗಿ ನಾಯಿಗಳ ಸರಣಿ ಹತ್ಯೆ ಮಾಡಿರುವ ಘಟನೆ ನಡೆದಿದೆ.

ಪಶ್ಚಿಮ ಬಂಗಾಳ ಮೂಲದ ಮಹಿಳೆಯೊಬ್ಬರು ಬ್ಲ್ಯಾಕ್ ಮ್ಯಾಜಿಕ್ ಗಾಗಿ ತಾನೇ ಸಾಕಿದ ನಾಯಿಗಳನ್ನು ಬರ್ಬರವಾಗಿ ಕೊಂದಿರೆ ಎಂಬ ಆರೋಪ ಕೇಳಿಬಂದಿದೆ. ಮಹದೇವಪುರದ ಚಿನ್ನಪ್ಪ ಲೇಔಟ್ ಖಾಸಗಿ ಅಪಾರ್ಟ್ ಮೆಂಟ್ ನಲ್ಲಿ ಈ ಘಟನೆ ನಡೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತ್ರಿಪಾರ್ಣ ಪಾಯ್ಕ್ ಎಂಬ ಮಹಿಳೆ ವಿರುದ್ಧ ಗಂಭೀರ ಆರೋಪ ಕೇಳಿಬಂದಿದ್ದು, ತಾನೇ ಸಾಕಿದ್ದ ನಾಯಿಯನ್ನು ಮಹಿಳೆ ಕತ್ತುಕೊಯ್ದು ಹತ್ಯೆ ಮಾಡಿದ್ದಾಳೆ. ನಾಲ್ಕು ದಿನಗಳ ಹಿಂದೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಆರೋಪಿ ಮಹಿಳೆ ನಾಲ್ಕು ಲ್ಯಾಬ್ರಡರ್ ನಾಯಿಗಳನ್ನು ಸಾಕುತ್ತಿದ್ದಳು. ನಾಲ್ಕು ತಿಂಗಳ ಹಿಂದಷ್ಟೇ ಮಹಿಳೆಯ ಮನೆಯಲ್ಲಿದ್ದ ಒಂದು ನಾಯಿ ನಾಪತ್ತೆಯಾಗಿತ್ತು. ಇದೀಗ ಮಹಿಳೆ ತಾನು ಸಾಕಿದ್ದ ಮತ್ತೊಂದು ನಾಯಿಯನ್ನು ಹತ್ಯೆ ಮಾಡಿದ್ದಾಳೆ. ಅಪಾರ್ಟ್ ಮೆಂಟ್ ನಲ್ಲಿ ದುರ್ವಾಸನೆ ಬರುತ್ತಿದ್ದ ಕಾರಣಕ್ಕೆ ನಿವಾಸಿಗಳು ಪೊಲೀಸರಿಗೆ ದೂರು ನೀಡಿದ್ದಾರೆ.

ಸ್ಥಳಕ್ಕಾಗಮಿಸಿ ಪರಿಶೀಲಿಸಿದ ಪೊಲೀಸರು ನಾಯಿ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ವರದಿ ಕೈಸೇರಿದೆ. ನಾಲ್ಕು ದಿನಗಳ ಹಿಂದೆಯೇ ನಾಯಿ ಹತ್ಯೆ ಮಾಡಿರುವುದು ದೃಢಪಟ್ಟಿದೆ. ಬ್ಲ್ಯಾಕ್ ಮ್ಯಾಜಿಕ್ ಗಾಗಿ ಮಹಿಳೆಯೇ ನಾಯಿಗಳನ್ನು ಹತ್ಯೆ ಮಾಡುತ್ತಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular