HomeLatest NewsBIG NEWS: ಮಗಳ ಮೇಲೆ ಮಲತಂದೆಯಿಂದಲೇ ಅತ್ಯಾಚಾರ: ಕೃತ್ಯದ ಬಳಿಕ ಇರಿದು ಕೊಂದು ಮೃತದೇಹದ ಮೇಲೆ...

BIG NEWS: ಮಗಳ ಮೇಲೆ ಮಲತಂದೆಯಿಂದಲೇ ಅತ್ಯಾಚಾರ: ಕೃತ್ಯದ ಬಳಿಕ ಇರಿದು ಕೊಂದು ಮೃತದೇಹದ ಮೇಲೆ ನೃತ್ಯ ಮಾಡಿ ವಿಕೃತಿ ಮೆರೆದ ಪಾಪಿ!

ಲಖನೌ: ಮಲತಂದೆಯೊಬ್ಬ ಮಗಳ ಮೇಲೆಯೇ ಅತ್ಯಾಚಾರವೆಸಗಿದ್ದು, ಬಳಿಕ ಆಕೆಯನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಬೆಳಕಿಗೆ ಬಂದಿದೆ.

ಉತ್ತರಪ್ರದೇಶದ ಲಖನೌದ ವಿಜ್ಞಾನಪುರದಲ್ಲಿ ನಡೆದಿದೆ. ಬಿಸಿಯೆ ವಿದ್ಯಾರ್ಥಿಯಾಗಿದ್ದ ಯುವತಿಗೆ ಕಾಲೇಜಿಗೆ 15 ದಿನಗಳ ಕಾಲ ರಜೆ ಇತ್ತು. ಹಾಸ್ಟೆಲ್ ನಲ್ಲಿದ್ದ ಯುವತಿಗೆ ಮನೆಗೆ ಹೋಗಲು ಇಷ್ಟವಿರಲಿಲ್ಲ. ಆದರೆ ತಾಯಿಯ ಒತ್ತಾಯಕ್ಕೆ ಅನಿವಾರ್ಯವಾಗಿ ಮನೆಗೆ ಹೋಗಿದ್ದಳು,. ಈ ವೇಳೆ ಮಲತಂದೆ ಮಗಳ ಮೇಲೆ ಅತ್ಯಾಚಾರವೆಸಗಿ 18 ಬಾರಿ ಇರಿದು ಕೊಂದಿದ್ದಾನೆ. ಕುತ್ತಿಗೆ, ಹೊಟ್ಟೆ ಸೇರಿದಂತೆ ಹಲವೆಡೆ ಚಾಕುವಿನಿಂದ ಇರಿಯಲಾಗಿದೆ. ಅಷ್ಟೇ ಅಲ್ಲ ಮೃತದೇಹದ ಮೇಲೆ ನಿಂತು ನೃತ್ಯಮಾಡಿ ವಿಕೃತ ಅಟ್ಟಹಾಸ ಮೆರೆದಿದ್ದಾನೆ ಎಂದು ಆರೋಪಿಸಲಾಗಿದೆ.

ಕೆಲ ದಿನಗಳ ಹಿಂದೆ ಹಾಸ್ಟೆಲ್ ನಿಂದ ಮನೆಗೆ ಹೋಗಿದ್ದಾಗ ಮಲತಂದೆ ತನ್ನ ಮಗಳ ಮೇಲೆ ಹಲ್ಲೆ ನಡೆಸಿದ್ದ. ಇದರಿಂದಾಗಿ ಆಕೆ ಮನೆಗೆ ಬರಲು ಇಷ್ಟಪಡುತ್ತಿರಲಿಲ್ಲ. ಆದರೆ ನಾನು ಒತ್ತಾಯಿಸಿದ್ದಕ್ಕೆ ಆಕೆ ಮನೆಗೆ ಬಂದಿದ್ದಳು. ಆಕೆ ರಜೆ ಕಲೆದು ಇನ್ನೇನು ಹಾಸ್ಟೆಲ್ ಗೆ ಹೋಗಬೇಕು ಎನ್ನುವಷ್ಟರಲ್ಲಿ ಮಲತಂದೆ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಆಕೆ ವಿರೋಧಿಸಿದಾಗ ಚಿತ್ರಹಿಂಸೆ ನೀಡಿ ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾನೆ ಎಂದು ತಾಯಿ ದೂರು ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತಾಯಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular