HomeLatest NewsBIG NEWS: ಡ್ರಗ್ ಪ್ರಕರಣ: ಮತ್ತೋರ್ವ ಖ್ಯಾತ ನಟ ಅರೆಸ್ಟ್

BIG NEWS: ಡ್ರಗ್ ಪ್ರಕರಣ: ಮತ್ತೋರ್ವ ಖ್ಯಾತ ನಟ ಅರೆಸ್ಟ್

ಚೆನ್ನೈ: ಡ್ರಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವು ನಟ-ನಟಿಯರು ಬಂಧನಕ್ಕೀಡಾದ ಉದಾಹರಣೆಗಳು ಸಾಕಷ್ಟಿವೆ. ಇದೀಗ ತಮಿಳು ಖ್ಯಾತ ನಟ ಕೃಷ್ಣ ಅವರನ್ನು ಈ ಪ್ರಕರಣದಲ್ಲಿ ಬಂಧಿಸಲಾಗಿದೆ.

ಡ್ರಗ್ ಕೇಸ್ ನಲ್ಲಿ ಈ ಹಿಂದೆ ನಟ ಶ್ರೀಕಾಂತ್, ನಿರ್ಮಾಪಕ ಪ್ರಸಾದ್ ಅವರನ್ನು ಬಂಧಿಸಲಾಗಿತ್ತು. ಈ ವೇಳೆ ಕೃಷ್ಣ ಅವರು ತಲೆಮರೆಸಿಕೊಂಡಿದ್ದರು. ಇದೀಗ ಕೃಷ್ಣ ಅವರನ್ನು ಬಂಧಿಸಿ ನುಂಗಬಾಕಂ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ.

ನಟ ಕೃಷ್ಣ ಡ್ರಗ್ ಪಾರ್ಟಿಗಳನ್ನು ಆಯೋಜಿಸುತ್ತಿದ್ದರು. ಇದರಲ್ಲಿ ಅವರು ಭಾಗಿಯಾಗಿದ್ದಾರು ಎನ್ನಲಾಗಿದೆ. ಇನ್ನು ಡ್ರಗ್ ಪ್ರಕರಣ ಸಂಬಂಧ ಈಗಾಗಲೇ 22 ಜನರನ್ನು ಬಂಧಿಸಲಾಗಿದೆ. ಪೊಲೀಸರು ಶಾಮೀಲಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular