BREAKING : ಯಶಸ್ವಿಯಾಗಿ ‘AXIOM​ ಮಿಷನ್​-4 ‘ಉಡಾವಣೆ :  40 ವರ್ಷಗಳ ಬಳಿಕ ಬಾಹ್ಯಾಕಾಶಕ್ಕೆ ಭಾರತೀಯ ಗಗನಯಾತ್ರಿ |WATCH VIDEO

ಭಾರತೀಯರು ಕುತೂಹಲದಿಂದ ಕಾಯುತ್ತಿದ್ದ ಕ್ಷಣ ಈಗ ಬಂದಿದೆ. ಅಮೆರಿಕದ ಫ್ಲೋರಿಡಾದಲ್ಲಿರುವ ನಾಸಾ(NASA)ದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಬೆಳಗಿನ ಜಾವ 2:31ಕ್ಕೆ (ಭಾರತೀಯ ಸಮಯ ಮಧ್ಯಾಹ್ನ 12:01) ಗಗನಯಾತ್ರಿಗಳನ್ನು ಹೊತ್ತ ರಾಕೆಟ್ ಉಡಾವಣೆಯಾಗಿದೆ.

ಸ್ಪೇಸ್ಎಕ್ಸ್ನ ಫಾಲ್ಕನ್ 9 ರಾಕೆಟ್ನಲ್ಲಿರುವ ಡ್ರ್ಯಾಗನ್ ಗಗನಯಾತ್ರಿಗಳನ್ನು ಹೊತ್ತೊಯ್ಯಲಿದೆ. ಈ ನೌಕೆ ಗುರುವಾರ ಅಂದರೆ ನಾಳೆ ಬೆಳಗ್ಗೆ 7:00ಕ್ಕೆ (ಭಾರತೀಯ ಸಮಯ ಸಂಜೆ 4:30) ಐಎಸ್ಎಸ್ನೊಂದಿಗೆ ಡಾಕ್ ಆಗುತ್ತದೆ.
ಭಾರತೀಯ ಗಗನಯಾತ್ರಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಮತ್ತು ಇತರ ಮೂವರು ಬುಧವಾರ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣ ಬೆಳೆಸಿದ್ದು, ಇದೀಗ ಆಕ್ಸಿಯಮ್ -4 ಮಿಷನ್ ಉಡಾವಣೆಯಾಗಿದೆ.

ಭಾರತೀಯ ಶುಭಾಂಶು ಶುಕ್ಲಾ ಇತರೆ ಮೂವರಿಂದ ಅಂತರಿಕ್ಷ ಪ್ರವಾಸ ಕೈಗೊಳ್ಳಲಾಗಿದೆ. ಇದರೊಂದಿಗೆ ಅಂತರಿಕ್ಷ ಪ್ರವಾಸ ಕೈಗೊಳ್ಳುತ್ತಿರುವ ಎರಡನೇ ಭಾರತೀಯ ಶುಭಾಂಶು ಶುಕ್ಲಾ ಅವರಾಗಿದ್ದಾರೆ. ಇದಕ್ಕೂ ಮೊದಲು ಭಾರತದ ರಾಕೇಶ್ ಶರ್ಮಾ ಅವರು ಅಂತರಿಕ್ಷಯಾನ ಪ್ರವಾಸ ಕೈಗೊಂಡಿದ್ದರು. 1984ರಲ್ಲಿ ರಷ್ಯಾದ ಸೋಯುಜ್ ನೌಕೆಯಲ್ಲಿ ಅಂತರಿಕ್ಷ ಪ್ರವಾಸ ಮಾಡಿ ರಾಕೇಶ್ ಶರ್ಮಾ ಇತಿಹಾಸ ನಿರ್ಮಿಸಿದ್ದರು. ಇದೀಗ ಮತ್ತೊಬ್ಬ ಭಾರತೀಯ ಅಂತರಿಕ್ಷ ಪ್ರವಾಸಕ್ಕೆ ಸಜ್ಜಾಗಿದ್ದಾರೆ. 40 ವರ್ಷದ ನಂತರ ಅಂತರಿಕ್ಷ ಯಾನ ಕೈಗೊಳ್ಳುತ್ತಿರುವ ಮೊದಲ ಭಾರತೀಯ ಶುಭಾಂಶು ಶುಕ್ಲಾ ಇಂತಹ ದೊಡ್ಡ ಯೋಜನೆಯ ಭಾಗವಾಗಿರುವುದಕ್ಕೆ ಅದೃಷ್ಟಶಾಲಿ ಎನ್ನಿಸುತ್ತದೆ ಎಂದು ತಮ್ಮ ಬಾಹ್ಯಾಕಾಶ ಕೇಂದ್ರ ಪ್ರವಾಸದ ಬಗ್ಗೆ ಭಾರತೀಯ ಶುಭಾಂಶು ಶುಕ್ಲಾ ಮಾಹಿತಿ ಹಂಚಿಕೊಂಡಿದ್ದಾರೆ.

“ಶುಕ್ಸ್” ಎಂಬ ಅಡ್ಡಹೆಸರಿನಿಂದ ಕರೆಯಲ್ಪಡುವ ಶುಕ್ಲಾ, ಬಾಹ್ಯಾಕಾಶಕ್ಕೆ ಪ್ರಯಾಣಿಸಿದ ಎರಡನೇ ಭಾರತೀಯರಾಗುತ್ತಾರೆ, ಅವರ ಆರಾಧ್ಯ ದೈವ ರಾಕೇಶ್ ಶರ್ಮಾ 1984 ರಲ್ಲಿ ಹಿಂದಿನ ಸೋವಿಯತ್ ಒಕ್ಕೂಟದ ಸೋಯುಜ್ ಬಾಹ್ಯಾಕಾಶ ನೌಕೆಯಲ್ಲಿ ಎಂಟು ದಿನಗಳ ಕಾಲ ಕಕ್ಷೆಯಲ್ಲಿ ಬಾಹ್ಯಾಕಾಶ ಹಾರಾಟ ನಡೆಸಿದ 40 ವರ್ಷಗಳ ನಂತರ ಪ್ರವಾಸಕ್ಕೆ ಶುಕ್ಲಾ ರೆಡಿಯಾಗಿದ್ದಾರೆ. 39 ವರ್ಷದ ಭಾರತೀಯ ವಾಯುಪಡೆಯ ಪೈಲಟ್ ಶುಕ್ಲಾ ಇತರ ಮೂವರು ಸಿಬ್ಬಂದಿಗಳೊಂದಿಗೆ ಐಎಸ್ಎಸ್ಗೆ ಫಾಲ್ಕನ್ 9 ರಾಕೆಟ್ನಲ್ಲಿ ಅಳವಡಿಸಲಾದ ಸ್ಪೇಸ್ಎಕ್ಸ್ನ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯಲ್ಲಿ ಪ್ರಯಾಣಿಸಲು ಸಿದ್ಧರಾಗಿದ್ದಾರೆ,

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read