HomeLatest NewsBREAKING : ಪೊಲೀಸ್ ಇಲಾಖೆಯಲ್ಲಿ 'ಅನುಕಂಪ ಆಧಾರಿತ ನೇಮಕಾತಿ' : ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ.!

BREAKING : ಪೊಲೀಸ್ ಇಲಾಖೆಯಲ್ಲಿ ‘ಅನುಕಂಪ ಆಧಾರಿತ ನೇಮಕಾತಿ’ : ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ.!

ಬೆಂಗಳೂರು : ಪೊಲೀಸ್ ಇಲಾಖೆಯಲ್ಲಿ ಅನುಕಂಪ ಆಧಾರಿತ ನೇಮಕಾತಿ ಕುರಿತು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

ಪೊಲೀಸ್ ಇಲಾಖೆಯಲ್ಲಿ, ಸೇವೆಯಲ್ಲಿದ್ದಾಗಲೇ ಮೃತಪಟ್ಟ ಸರ್ಕಾರಿ ನೌಕರರ ಅವಲಂಬಿತರು ಅನುಕಂಪದ ಆಧಾರದ ಮೇಲೆ ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ ಅರ್ಜಿ ಸಲ್ಲಿಸಿದ್ದು, ಅವರುಗಳ ಪ್ರಸ್ತಾವನೆಯನ್ನು ಪರಿಶೀಲಿಸಲಾಗಿರುತ್ತದೆ.

ಕರ್ನಾಟಕ ಸಿವಿಲ್ ಸೇವೆಗಳು(ಅನುಕಂಪ ಆಧಾರದ ಮೇಲೆ ನೇಮಕಾತಿ) 1996ರ ನಿಯಮಗಳಡಿ ಉಲ್ಲೇಖಿತ ಸರ್ಕಾರದ ಅಧಿಸೂಚನೆ ಮತ್ತು ನಿರ್ದೇಶನದನ್ವಯ ನೇಮಕಾತಿಗೆ ಅರ್ಹರಿರುವ ಈ ಕೆಳಕಂಡ ಅಭ್ಯರ್ಥಿಗಳನ್ನು ಅವರುಗಳ ಹೆಸರಿನ ಮುಂದೆ ನಮೂನೆಯ ಕಾಲಂ 04 ರಲ್ಲಿ ನಮೂದಿಸಲಾದ ಘಟಕಗಳಲ್ಲಿ ಲಭ್ಯವಿರುವ ದ್ವಿತೀಯ ದರ್ಜೆ ಸಹಾಯಕ ನೇರ ನೇಮಕಾತಿ ಹುದ್ದೆಗೆ ನೇಮಕಾತಿ ಮಾಡಲು ಸದರಿ ಕಛೇರಿ/ ಘಟಕಗಳಿಗೆ ಹಂಚಿಕೆ ಮಾಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನೇಮಕಾತಿ ಮಾಡುವ ಪ್ರಾಧಿಕಾರಿ/ ಅಧಿಕಾರಿಗಳು ಈ ಕೆಳಕಂಡ ಅಂಶಗಳನ್ನು ಪರಿಶೀಲಿಸಿದ ನಂತರ ಸದರಿ ಅಭ್ಯರ್ಥಿಗಳಿಗೆ ತಮ್ಮ ಘಟಕದಲ್ಲಿ ಲಭ್ಯವಿರುವ ದ್ವಿತೀಯ ದರ್ಜೆ ಸಹಾಯಕ ನೇರ ನೇಮಕಾತಿ ಹುದ್ದೆಗೆ ನೇಮಕಾತಿ ಆದೇಶ ನೀಡುವುದು.

1) ಅರ್ಜಿದಾರರು ಸಂಬಂಧಿಸಿದ ಇಲಾಖೆಯ ನೇಮಕಾತಿ ನಿಯಮಗಳಿಗೆ ಅನುಸಾರವಾಗಿ ಅರ್ಹತೆ ಹೊಂದಿದ್ದು, ಅಗತ್ಯವಿರುವ ಎಲ್ಲಾ ಅಂಶಗಳನ್ನು ಪೂರೈಸಿರಬೇಕು.
2) ಅರ್ಜಿದಾರರು ನೇಮಕಾತಿ ನಿಯಮಗಳಾನುಸಾರ ವಿದ್ಯಾರ್ಹತೆ ಹೊಂದಿರತಕ್ಕದ್ದು ಮತ್ತು ವಯೋಮಿತಿಯೊಳಗೆ ಇರತಕ್ಕದ್ದು.
3) ಅರ್ಜಿದಾರರು ಉಲ್ಲೇಖದಲ್ಲಿ ನಮೂದಿಸಿದ ಸರ್ಕಾರದ ಅಧಿಸೂಚನೆಗಳ ಪ್ರಕಾರ ಎಲ್ಲಾ ಷರತ್ತುಗಳನ್ನು ನಿಖರವಾಗಿ ಪಾಲಿಸತಕ್ಕದ್ದು.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular