HomeLatest NewsBIG NEWS: ಸಾಂಬಾರ್ ವಿಚಾರವಾಗಿ ಗಲಾಟೆ: ಕಬ್ಬಿಣದ ರಾಡ್ ನಿಂದ ಸ್ನೇಹಿತನನ್ನೇ ಹೊಡೆದು ಕೊಂದ ವ್ಯಕ್ತಿ!

BIG NEWS: ಸಾಂಬಾರ್ ವಿಚಾರವಾಗಿ ಗಲಾಟೆ: ಕಬ್ಬಿಣದ ರಾಡ್ ನಿಂದ ಸ್ನೇಹಿತನನ್ನೇ ಹೊಡೆದು ಕೊಂದ ವ್ಯಕ್ತಿ!

ಬೆಂಗಳೂರು: ಸಾಂಬಾರ್ ಮಾಡುವ ವಿಚಾರವಾಗಿ ಸ್ನೇಹಿತರ ನಡುವೆ ಆರಂಭವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಬೆಂಗಳೂರಿನ ತಲಘಟ್ಟಪುರದಲ್ಲಿ ಈ ಘಟನೆ ನಡೆದಿದೆ.

ನೇಪಾಳ ಮೂಲದ ಬಹದ್ದೂರ್ ಮೃತ ಯುವಕ. ಬೆಂಗಳೂರಿನ ತಲಘಟ್ಟಪುರದಲ್ಲಿ ಅಪಾರ್ಟ್ ಮೆಂಟ್ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ಊಟಕ್ಕೆ ಸಾಂಬಾರ್ ಮಾಡುವ ವಿಚಾರವಾಗಿ ಬಹದ್ದೂರ್ ಹಾಗೂ ಸ್ನೇಹಿತ ಮಹೇಂದ್ರ ನಡುವೆ ಜಗಳವಾಗಿದೆ. ಕೋಪದ ಬರದಲ್ಲಿ ಮಹೇಂದ್ರ ಕಬ್ಬಿಣದ ರಾಡ್ ನಿಂದ ಬಹದ್ದೂರ್ ಗೆ ಹೊಡೆದು ಕೊಲೆಗೈದಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತಲಘಟ್ಟಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಮಹೇಂದ್ರನನ್ನು ಬಂಧಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular