ಶಿವಮೊಗ್ಗ: ಪದೇ ಪದೇ ಪ್ರೀತಿಸುವಂತೆ ಯುವತಿಗೆ ಪೀಡಿಸುತ್ತಿದ್ದು, ಆಕೆ ಒಪ್ಪಿಕೊಳ್ಳದಿದ್ದಾಗ ಸಾಮಾಜಿಕ ಜಾಲತಾಣ ಖಾತೆಗೆ ಆಕೆಯ ಚಿತ್ರವನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಬಳಸಿರುವುದಾಗಿ ಆರೋಪಿಸಲಾಗಿದೆ. ಈ ಕುರಿತಾಗಿ ಶಿವಮೊಗ್ಗ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ಸ್ಟಾಗ್ರಾಂ ನಲ್ಲಿ ಎರಡು ಬಾರಿ ಖಾತೆ ರಿಪೋರ್ಟ್ ಮಾಡಿ ಖಾತೆಯನ್ನು ಡಿಲೀಟ್ ಮಾಡಿಸಿದರೂ ಬೇರೆ ಬೇರೆ ಖಾತೆಗಳಿಂದ ಪ್ರೀತಿಸುವಂತೆ ಪೀಡಿಸಿದ್ದು, ಇದಕ್ಕೆ ಒಪ್ಪದಿದ್ದಾಗ ಅಶ್ಲೀಲ ಫೋಟೋಗಳನ್ನು ಹಾಕುವುದಾಗಿ ಬೆದರಿಸಲಾಗಿದೆ. ಯುವತಿ ಚಿತ್ರವನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಹಾಕಲಾಗಿದೆ ಎಂದು ದೂರು ನೀಡಲಾಗಿದ್ದು, ಪೊಲೀಸರು ಕ್ರಮ ಕೈಗೊಂಡಿದ್ದಾರೆ.