HomeLatest NewsBREAKING: ನಿರ್ದೇಶಕ ನಂದಕಿಶೋರ್ ವಿರುದ್ಧ ವಂಚನೆ ಆರೋಪ: ಕಾನೂನು ಹೋರಾಟದ ಎಚ್ಚರಿಕೆ ನೀಡಿದ ಯುವನಟ ಶಬರೀಶ್...

BREAKING: ನಿರ್ದೇಶಕ ನಂದಕಿಶೋರ್ ವಿರುದ್ಧ ವಂಚನೆ ಆರೋಪ: ಕಾನೂನು ಹೋರಾಟದ ಎಚ್ಚರಿಕೆ ನೀಡಿದ ಯುವನಟ ಶಬರೀಶ್ ಶೆಟ್ಟಿ

ಬೆಂಗಳೂರು: ನಿರ್ದೇಶಕ ನಂದಕಿಶೋರ್ ವಿರುದ್ಧ ಯುವನಟ ಶಬರೀಶ್ ಶೆಟ್ಟಿ ಗಂಭೀರ ಆರೋಪ ಮಾಡಿದ್ದಾರೆ. ನಂದಕಿಶೋರ್ ಹಣ ಪಡೆದು ವಂಚನೆ ಮಾಡಿದ್ದಾಗಿ ಆರೋಪಿಸಿದ್ದಾರೆ.

ನಿರ್ದೇಶಕ ನಂದಕಿಶೋರ್ ಕೆಲ ವರ್ಷಗಳ ಹಿಂದೆ ನನಗೆ ಜಿಮ್ ವೊಂದರಲ್ಲಿ ಪರಿಚಯವಾಗಿದ್ದರು. ಚಿನ್ನ ಅಡವಿಟ್ಟು ನಂದಕಿಶೋರ್ ಗೆ 22 ಲಕ್ಷ ರೂಪಾಯಿ ಹಣ ಕೊಟ್ಟಿದ್ದೆ. ಆ ಹಣವನ್ನೂ ಇನ್ನೂ ವಾಪಸ್ ಕೊಟ್ಟಿಲ್ಲ. ಹಣ ವಾಪಸ್ ಕೊಡಲು ಕೇಳಿದರೆ ಧಮ್ಕಿ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹಣದ ಬದಲಿಉ ಸಿನಿಮಾದಲ್ಲಿ ಅವಕಾಶ ಕೊಡುವುದಾಗಿ ಹೇಳಿ ಮೋಸ ಮಾಡಿದ್ದಾರೆ. ನನ್ನ ಹಣವನ್ನೂ ಹಿಂತಿರುಗಿಸಿಲ್ಲ, ಸಿನಿಮಾದಲ್ಲಿಯೂ ಅವಕಾಶ ಕೊಟ್ಟಿಲ್ಲ. ಈಗ ಹಣ ಕೇಳಿದರೆ ಕೆಸಿಸಿ ಟೂರ್ನಿಯಿಂದ ಹೊರಹಾಕುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಕೆಸಿಸಿ ಟೂರ್ನಿಯಲ್ಲಿ ನಾನು ಎರಡು ಸೀಸನ್ ಆಡಿದ್ದೇನೆ. ಹಣ ಕೇಳಿದ್ರೆ ಟೂರ್ನಿಯಿಂದ ಹೊರ ಕಳಿಸುತ್ತೇನೆ ಅಂತಿದ್ದಾರೆ. ಸುದೀಪ್ ಸರ್ ಜೊತೆ ಆಡುವ ಆಸೆಯಿಂದ ಸುಮ್ಮನಿದ್ದೇನೆ ಎಂದಿದ್ದಾರೆ.

ಈ ವಿಚಾರ ಸುದೀಪ್ ಸರ್ ಗಮನಕ್ಕೆ ತರಲು ಮುಂದಾದ ವೇಳೆ ನಂದಕಿಶೋರ್ ನನ್ನನ್ನು ತಡೆದರು. ಹಣ ಕೊಡದಿದ್ದರೆ ನಂದಕಿಶೋರ್ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ. ಫಿಲ್ಮ್ ಚೇಂಬರ್ ಗೂ ದೂರು ಕೊಡುತ್ತೇನೆ ಎಂದು ಶಬರೀಶ್ ಶೆಟ್ಟಿ ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular