HomeLatest Newsಒನ್ ವೇನಲ್ಲಿ ಬಂದು ಡಿಸಿಗೆ ಆವಾಜ್ ಹಾಕಿದ ಬೈಕ್ ಸವಾರನಿಗೆ 2 ಸಾವಿರ ರೂ. ದಂಡ

ಒನ್ ವೇನಲ್ಲಿ ಬಂದು ಡಿಸಿಗೆ ಆವಾಜ್ ಹಾಕಿದ ಬೈಕ್ ಸವಾರನಿಗೆ 2 ಸಾವಿರ ರೂ. ದಂಡ

ದಾವಣಗೆರೆ: ಒನ್ ವೇ ರಸ್ತೆಯಲ್ಲಿ ಬೈಕ್ ನಲ್ಲಿ ಬಂದು ಜಿಲ್ಲಾಧಿಕಾರಿಗೆ ಆವಾಜ್ ಹಾಕಿದ್ದ ಬೈಕ್ ಸವಾರನಿಗೆ ಪೊಲೀಸರು 2,000 ರೂ. ದಂಡ ವಿಧಿಸಿದ್ದಾರೆ.

ದಾವಣಗೆರೆಯ ಎಸ್. ನಿಜಲಿಂಗಪ್ಪ ಬಡಾವಣೆಯ ಸಮೀಪ ಗುರುವಾರ ಘಟನೆ ನಡೆದಿದೆ. ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಅವರು ಪ್ರತಿದಿನ ಬೆಳಗ್ಗೆ ಸೈಕಲ್ ರೈಡ್ ಮಾಡುತ್ತಾರೆ. ಗುರುವಾರ ವಾಯು ವಿಹಾರಕ್ಕೆ ಹೋಗಿದ್ದಾಗ ನಿಜಲಿಂಗಪ್ಪ ಬಡಾವಣೆಯ ಶಾರದಾಂಬ ದೇವಾಲಯ ಸಮೀಪ ಒನ್ ವೇ ರಸ್ತೆಯಲ್ಲಿ ವ್ಯಕ್ತಿಯೊಬ್ಬ ಬೈಕ್ ನಲ್ಲಿ ಬಂದಿದ್ದಾನೆ. ಆತನಿಗೆ ಒನ್ ವೇ ರಸ್ತೆಯಲ್ಲಿ ಬರಬಾರದು ಎಂದು ತಿಳಿಹೇಳಿದ್ದಕ್ಕೆ ಬೈಕ್ ಸವಾರ ಜಿಲ್ಲಾಧಿಕಾರಿ ಎಂದು ಅರಿಯದೇ ದುರ್ವರ್ತನೆ ತೋರಿ ಆವಾಜ್ ಹಾಕಿ ಬೈದಿದ್ದಾನೆ. ಬೈಕ್ ಫೋಟೋ ತೆಗೆದು ಎಸ್‍ಪಿ ಉಮಾ ಪ್ರಶಾಂತ್ ಗೆ ಜಿಲ್ಲಾಧಿಕಾರಿ ವಾಟ್ಸಾಪ್ ಮಾಡಿ ಸೂಕ್ತ ಕ್ರಮಕ್ಕೆ ಸೂಚಿಸಿದ್ದಾರೆ. ಪೊಲೀಸರು ಬೈಕ್ ಸವಾರ ನಾಗರಾಜ್ ನನ್ನು ಪತ್ತೆ ಮಾಡಿದ್ದು, 2000 ರೂ. ದಂಡ ವಿಧಿಸಿದ್ದಾರೆ. ದಾವಣಗೆರೆಯ ಎಸ್.ಎಸ್. ಬಡಾವಣೆ ನಿವಾಸಿ ನಾಗರಾಜ್ ಗೆ ದಂಡ ವಿಧಿಸಲಾಗಿದೆ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular