HomeLatest NewsBIG NEWS : 'ರಾಜ್ಯ ಸರ್ಕಾರಿ' ನೌಕರರಿಗೆ ವಿಮಾ ಇಲಾಖೆಯ ಆನ್ ಲೈನ್ ಸೇವೆ ವಿಸ್ತರಣೆ...

BIG NEWS : ‘ರಾಜ್ಯ ಸರ್ಕಾರಿ’ ನೌಕರರಿಗೆ ವಿಮಾ ಇಲಾಖೆಯ ಆನ್ ಲೈನ್ ಸೇವೆ ವಿಸ್ತರಣೆ : ಸರ್ಕಾರದಿಂದ ಮಹತ್ವದ ಆದೇಶ.!

ಬೆಂಗಳೂರು : ರಾಜ್ಯ ಸರ್ಕಾರಿ ನೌಕರರಿಗೆ ವಿಮಾ ಇಲಾಖೆಯ ಆನ್ ಲೈನ್ ಸೇವೆ ವಿಸ್ತರಣೆ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ ಹೊರಡಿಸಲಾಗಿದೆ.

ವಿಮಾ ಇಲಾಖೆಯ ಸೇವೆಗಳನ್ನು ಗಣಕೀಕರಣಗೊಳಿಸಲಾಗಿದ್ದು, ಹೆಚ್.ಆರ್.ಎಂ.ಎಸ್., ಮತ್ತು ಖಜಾನೆ -|| ವೇದಿಕೆಗಳ ಮೂಲಕ ವೇತನ ಪಡೆಯುವ ರಾಜ್ಯಸರ್ಕಾರದ ಅಧಿಕಾರಿಗಳು/ನೌಕರರಿಗೆ ಖಜಾನೆ-|| DDO Code ಆಧಾರದ ಮೇಲೆ ವಿಮಾ ಇಲಾಖೆಯ ಆನ್ಲೈನ್ ಸೇವೆಗಳನ್ನು ಒದಗಿಸಲಾಗುತ್ತಿದೆ. ಅನ್ಯ ಸೇವೆ/ನಿಯೋಜನೆ ಮೇಲೆ, ನಿಗಮ ಮಂಡಳಿ/ಸ್ಥಳೀಯ ಸಂಸ್ಥೆ ಮತ್ತು ಸ್ವಾಯತ್ತ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ರಾಜ್ಯ ಸರ್ಕಾರದ ಅಧಿಕಾರಿಗಳು/ನೌಕರರ ವೇತನವನ್ನು ಹೆಚ್.ಆರ್.ಎಂ.ಎಸ್. ಮತ್ತು ಖಜಾನೆ-|| ವೇದಿಕೆ ಮೂಲಕ ಸೆಳೆಯದಿರುವುದರಿಂದ ಇವರಿಗೆ ವಿಮಾ ಇಲಾಖೆಯ ಆನ್ಲೈನ್ ಸೇವೆಗಳನ್ನು ಒದಗಿಸಲು ಸಾಧ್ಯವಾಗುತ್ತಿರಲಿಲ್ಲ.
ಆದುದರಿಂದ, ಅನ್ಯ ಸೇವೆ/ನಿಯೋಜನೆ ಮೇಲೆ, ನಿಗಮ ಮಂಡಳಿ/ಸ್ಥಳೀಯ ಸಂಸ್ಥೆ ಮತ್ತು ಸ್ನಾಯತ್ತ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ರಾಜ್ಯ ಸರ್ಕಾರದ ಅಧಿಕಾರಿಗಳು/ನೌಕರರಿಗೆ ವಿಮಾ ಇಲಾಖೆಯ ಆನ್ಲೈನ್ ಸೇವೆಗಳನ್ನು ಒದಗಿಸಲು ಸಾಧ್ಯವಾಗವಂತೆ NTT DDO Code ಆಧಾರದ ಮೇಲೆ ತಂತ್ರಾಂಶವನ್ನು ಅಭಿವೃದ್ಧಿಪಡಿಸಲು, ಉಲ್ಲೇಖ(1) ರ ಆದೇಶದಲ್ಲಿ ಸರ್ಕಾರದ ಅನುಮತಿ ನೀಡಲಾಗಿರುತ್ತದೆ. ಅದರನ್ವಯ NTT DDO Code ಆಧಾರದ ಮೇಲೆ ಅನ್ಯ ಸೇವೆ/ನಿಯೋಜನೆ ಮೇಲೆ, ನಿಗಮ ಮಂಡಳಿ/ಸ್ಥಳೀಯ ಸಂಸ್ಥೆ ಮತ್ತು ಸ್ವಾಯತ್ತ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ರಾಜ್ಯ ಸರ್ಕಾರದ ಅಧಿಕಾರಿಗಳು/ನೌಕರರಿಗೆ ವಿಮಾ ಇಲಾಖೆಯ ಆನ್ಲೈನ್ ಸೇವೆಗಳನ್ನು ಒದಗಿಸಲು ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿರುತ್ತದೆ.

ಪ್ರಸ್ತುತ, NTT DDO Code ಆಧಾರದ ತಂತ್ರಾಂಶವು ಲಭ್ಯವಿದ್ದು, ನಿಗಮ ಮಂಡಳಿ/ಸ್ಥಳೀಯ ಸಂಸ್ಥೆ ಮತ್ತು ಸ್ನಾಯತ್ತ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ರಾಜ್ಯ ಸರ್ಕಾರದ ಅಧಿಕಾರಿಗಳು/ನೌಕರರು ಅನುಬಂಧ-1 ರಲ್ಲಿ ತಿಳಿಸಿರುವ ಕಾರ್ಯವಿಧಾನಗಳನ್ನು ಪಾಲಿಸಿ, ವಿಮಾ ಇಲಾಖೆಯ ಆನ್ಲೈನ್ ಸೇವೆಗಳನ್ನು ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular