HomeLatest NewsRJD ನಾಯಕ ತೇಜಸ್ವಿ ಯಾದವ್ ನಿವಾಸದ ಬಳಿ ಗುಂಡಿನ ದಾಳಿ

RJD ನಾಯಕ ತೇಜಸ್ವಿ ಯಾದವ್ ನಿವಾಸದ ಬಳಿ ಗುಂಡಿನ ದಾಳಿ

ಪಾಟ್ನಾ: ಬಿಹಾರ ವಿಧಾನಸಭೆ ವಿಪಕ್ಷ ನಾಯಕ, ಆರ್ ಜೆಡಿ ನಾಯಕ ತೇಜಸ್ವಿ ಯಾದವ್ ಹಾಗೂ ಸಚಿವ ಅಶೋಕ್ ಚೌಧರಿ ನಿವಾಸದ ಬಳಿ ಗುಂಡಿನ ದಾಅಳಿ ನಡೆದಿದೆ.

ವಿಮಾನ ನಿಲ್ದಾಣ ಪೊಲೀಸ್ ಠಾಣೆ ವ್ಯಾಪ್ತಿಯ ವಿಐಪಿ ಕೌಶಲ್ ನಗರದಲ್ಲಿ ಈ ಘಟನೆ ನಡೆದಿದೆ. ಬೈಕ್ ನಲ್ಲಿ ಬಂದಿದ್ದ ದುಷ್ಕರ್ಮಿಗಳು ರಾಹುಲ್ ಎಂಬಾತನ ಮೇಲೆ ಗುಂಡು ಹಾರಿಸಿದ್ದಾರೆ. ಬಳಿಕ ಆತನ ಬಳಿ ಇದ್ದ 400ರೂಪಾಯಿ ಹಣವನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಗುಂಡಿನ ದಾಳಿ ನಡೆದ ಪ್ರದೇಶದಲ್ಲಿ ತೇಜಸ್ವಿ ಯಾದವ್ ಹಾಗೂ ಸಚಿವ ಅಶೋಕ್ ಚೌಧರಿ ಮನೆ ಮಾತ್ರವಲ್ಲ, ಹಲವು ಅಧಿಕಾರಿಗಳು, ನ್ಯಾಯಮೂರ್ತಿಗಳ ಮನೆಗಳೂ ಇವೆ. ಅಪಾಚೆ ಬೈಕ್ ನಲ್ಲಿ ಹೋಗುತ್ತಿದ್ದ ದುಷ್ಕರ್ಮಿಗಳು ಮೊದಲು ರಾಹುಲ್ ಎಂಬಾತನನ್ನು ತಳ್ಳಿ ಬೀಳಿಸಿ ಬಳಿಕ ಗುಂಡಿನ ದಾಳಿ ನಡೆಸಿದ್ದಾರೆ ಎಂದು ತಿಳಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular