HomeLatest NewsBREAKING : ನಟ ಆರ್ಯ ಒಡೆತನದ ಹೋಟೆಲ್ ಗಳ ಮೇಲೆ 'IT' ಅಧಿಕಾರಿಗಳ ದಿಢೀರ್...

BREAKING : ನಟ ಆರ್ಯ ಒಡೆತನದ ಹೋಟೆಲ್ ಗಳ ಮೇಲೆ ‘IT’ ಅಧಿಕಾರಿಗಳ ದಿಢೀರ್ ದಾಳಿ

ಚೆನ್ನೈ: ತಮಿಳು ಸ್ಟಾರ್ ನಟ ಆರ್ಯ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ. ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆದಿದೆ.

ನಟ, ನಿರ್ಮಾಪಕ ಕೂಡ ಆಗಿರುವ ನಟ ಆರ್ಯ, ಉದ್ಯಮಿ ಕೂಡ ಹೌದು. ಸೀ ಶೆಲ್ ಹೆಸರಿನ ರೆಸ್ಟೋರೆಂಟ್ ಚೈನ್ ನಡೆಸುತ್ತಿರುವ ಆರ್ಯ, ತೆರಿಗೆ ವಂಚನೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಆರ್ಯ ಒಡೆತನದ ಹೋಟೆಲ್ ಗಳ ಮೇಲೆ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಸಿ ಶೆಲ್ ಹೆಸರಿನ ರೆಸ್ಟೋರೆಂಟ್ ಚೈನ್ ನಿಂದ ಆರ್ಯ ದೊಡ್ಡ ಮೊತ್ತದ ಆದಾಯ ಪಡೆಯುತ್ತಿದ್ದು, ಆದರೆ ಈ ಆದಾಯವನ್ನು ಸರ್ಕಾರದಿಂದ ಮರೆಮಾಚಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಅಣ್ಣಾನಗರ್, ವೆಲ್ಲಾಚೆರಿ, ಕುಟ್ಟಿವಾಕಂ, ಕಿಲ್ಪಾಕ್ ಸೇರಿದಂತೆ ಹಲವೆಡೆ ರೆಸ್ಟೋರೆಂಟ್ ಚೈನ್ ಮೇಲೆ ದಾಅಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular