HomeLatest NewsBREAKING: ಟರ್ಫ್ ಕ್ಲಬ್ ಗೊಬ್ಬರ ಖರೀದಿಯಲ್ಲಿ ಅಕ್ರಮ: 2.5 ಕೋಟಿ ಅವ್ಯವಹಾರ ನಡೆಸಿರುವ ಸಿಬ್ಬಂದಿ

BREAKING: ಟರ್ಫ್ ಕ್ಲಬ್ ಗೊಬ್ಬರ ಖರೀದಿಯಲ್ಲಿ ಅಕ್ರಮ: 2.5 ಕೋಟಿ ಅವ್ಯವಹಾರ ನಡೆಸಿರುವ ಸಿಬ್ಬಂದಿ

ಬೆಂಗಳೂರು: ಟರ್ಫ್ ಕ್ಲಬ್ ನಲ್ಲಿ ಗೊಬ್ಬರ ಖರೀದಿಯಲ್ಲಿ ಭಾರಿ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ. ಟರ್ಫ್ ಕ್ಲಬ್ ಸಿಬ್ಬಂದಿಯಿಂದಲೇ ಈ ಕೃತ ನಡೆದಿದೆ.

ಟರ್ಫ್ ಕ್ಲಬ್ ಗೊಬ್ಬರ ಖರೀದಿಯಲ್ಲಿ ಬರೋಬ್ಬರಿ 2.5 ಕೋಟಿ ಅಕ್ರಮವೆಸಗಲಾಗಿದೆ. ಟರ್ಫ್ ಕ್ಲಬ್ ಸಿಬ್ಬಂದಿಯೇ ಎರಡು ವರ್ಷಗಳಲ್ಲಿ 2.5 ಕೋಟಿ ಅಕ್ರಮವೆಸಗಿದ್ದಾರೆ ಎಂದು ತಿಳಿದುಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಟರ್ಫ್ ಕ್ಲಬ್ ನೌಕರ ಶ್ರೀನಿವಾಸ್ ಎಂಬುವವರಿಂದ ಅಕ್ರಮ ನಡೆದಿದೆ. ಟರ್ಫ್ ಕ್ಲಬ್ ಗೊಬ್ಬರ ಖರೀದಿ ಟೆಂಡರ್ ಗಳನ್ನು ಶ್ರೀನಿವಾಸ್ ನೋಡಿಕೊಳ್ಳುತ್ತಿದ್ದರು. 2024ರಲ್ಲಿ ಅನುಮಾನಗೊಂಡು ಕ್ಲಬ್ ಆಡಿಟಿಂಗ್ ಮಾಡಿದೆ. ಈ ವೇಳೆ ಕೋಟ್ಯಂತರ ರೂಪಾಯಿ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ.

ಸದ್ಯ ಈ ಬಗ್ಗೆ ಹೈಗ್ರೌಂಡ್ಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

For Latest News Updates, Join Our Whatsapp Community🚩
RELATED ARTICLES

Most Popular