HomeLatest Newsಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆ ಅನುಷ್ಠಾನ ; ರೈತರಿಂದ ನೋಂದಣಿಗಾಗಿ ಅರ್ಜಿ ಆಹ್ವಾನ

ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆ ಅನುಷ್ಠಾನ ; ರೈತರಿಂದ ನೋಂದಣಿಗಾಗಿ ಅರ್ಜಿ ಆಹ್ವಾನ

ಕರ್ನಾಟಕ ಸರ್ಕಾರವು 2025 ರ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯನ್ನು ಜಿಲ್ಲೆಯ ಎಂಟು ತಾಲ್ಲೂಕಿನ ಎಲ್ಲಾ 14 ಹೋಬಳಿಗಳಲ್ಲಿ ಅನುಷ್ಠಾನಗೊಳಿಸಲು ಮಂಜೂರಾತಿ ನೀಡಿದೆ.

ಧಾರವಾಡ ಜಿಲ್ಲೆಯಲ್ಲಿ ಯೋಜನೆಯ ವ್ಯಾಪ್ತಿಗೆ ಒಳಪಟ್ಟಿರುವ ಬೆಳೆಗಳು: ಹೋಬಳಿ ಮಟ್ಟದ (14) ಬೆಳೆಗಳು: ಭತ್ತ (ನೀ.), ಭತ್ತ (ಮ.ಆ.), ಮುಸುಕಿನ ಜೋಳ(ನೀ.), ಮುಸುಕಿನ ಜೋಳ(ಮ.ಆ.), ಜೋಳ(ಮ.ಆ.), ಸಾವೆ(ಮ.ಆ), ಉದ್ದು(ಮ.ಆ.), ತೊಗರಿ(ಮ.ಆ.), ಹೆಸರು(ಮ.ಆ.), ಸೋಯಾಅವರೆ(ಮ.ಆ.), ನೆಲಗಡಲೆ(ಶೇಂಗಾ)(ಮ.ಆ.), ನೆಲಗಡಲೆ(ಶೇಂಗಾ)(ನೀ.), ಹತ್ತಿ(ಮ.ಆ.), ಹತ್ತಿ(ನೀ.), ಈರುಳ್ಳಿ(ಮ.ಆ.), ಈರುಳ್ಳಿ(ನೀ.), ಆಲೂಗಡ್ಡೆ(ನೀ.), ಆಲೂಗಡ್ಡೆ(ಮ.ಆ.), ಟೊಮ್ಯಾಟೊ, ಕೆಂಪು ಮೆಣಸಿನಕಾಯಿ (ಮ.ಆ.) ಮತ್ತು ಕೆಂಪು ಮೆಣಸಿನಕಾಯಿ (ನೀ.)

ಗ್ರಾಮ ಪಂಚಾಯತಿ ಮಟ್ಟದ ಬೆಳೆಗಳು: ಧಾರವಾಡ ಮತ್ತು ಅಳ್ನಾವರ ತಾಲ್ಲೂಕಿನಲ್ಲಿ ಭತ್ತ (ಮಳೆ ಆಶ್ರಿತ), ಕಲಘಟಗಿ ತಾಲ್ಲೂಕಿನಲ್ಲಿ ಭತ್ತ (ಮಳೆ ಆಶ್ರಿತ), ಮುಸುಕಿನಜೋಳ (ಮಳೆ ಆಶ್ರಿತ), ಹುಬ್ಬಳ್ಳಿ, ಹುಬ್ಬಳ್ಳಿ ನಗರ ತಾಲ್ಲೂಕಿನಲ್ಲಿ ನೆಲಗಡಲೆ (ಶೇಂಗಾ)(ಮಳೆ ಆಶ್ರಿತ) ಕುಂದಗೋಳ ತಾಲ್ಲೂಕಿನಲ್ಲಿ ನೆಲಗಡಲೆ(ಶೇಂಗಾ) (ಮಳೆ ಆಶ್ರಿತ) ಮತ್ತು ಹತ್ತಿ (ಮಳೆ ಆಶ್ರಿತ) ನವಲಗುಂದ ಮತ್ತು ಅಣ್ಣಿಗೇರಿ ತಾಲ್ಲೂಕಿನಲ್ಲಿ ಮುಸುಕಿನಜೋಳ (ಮಳೆಆಶ್ರಿತ), ಹೆಸರು (ಮಳೆ ಆಶ್ರಿತ)

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬೆಳೆಸಾಲ ಪಡೆಯುವ ಹಾಗೂ ಪಡೆಯದ ರೈತರಿಗೆ, ಇತರೆ ಬೆಳೆಗಳಿಗೆ ಜುಲೈ 31, 2025 ಮತ್ತು ಕೆಂಪು ಮೆಣಸಿನಕಾಯಿ (ನೀರಾವರಿ ಹಾಗೂ ಮಳೆ ಆಶ್ರಿತ) ಬೆಳೆಗೆ ಅಗಸ್ಟ್ 16, 2025 ರೊಳಗಾಗಿ ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಅಗ್ರಿಕಲ್ಚರಲ್ ಇನ್ಸೂರೆನ್ಸ್ ಕಂಪನಿ ಬೆಂಗಳೂರು, ಸ್ಥಳಿಯ ಕೃಷಿ ಇಲಾಖೆ, ಕಂದಾಯ, ಗ್ರಾಮೀಣ ಅಭಿವೃದ್ಧಿ, ತೋಟಗಾರಿಕೆ ಇಲಾಖೆ ಸಿಬ್ಬಂದಿ ಮತ್ತು ಸ್ಥಳೀಯ ಹಣಕಾಸು ಸಂಸ್ಥೆಗಳಾದ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ, ಸೇವಾ ಬ್ಯಾಂಕುಗಳ ಸಿಬ್ಬಂದಿಯವರನ್ನು ಇವರನ್ನು ಸಂಪರ್ಕಿಸಬಹುದು. ಅಥವಾ ಅಗ್ರಿಕಲ್ಚರಲ್ ಇನ್ಸೂರೆನ್ಸ್ ಕಂಪನಿಯ ದೂರವಾಣಿ ಸಂಖ್ಯೆ: 1800-425-0505 ಗೆ ಸಂಪರ್ಕಿಸಬಹುದು.

2025-26 ನೇ ಸಾಲಿನ ಬೆಳೆ ವಿಮೆ ಯೋಜನೆಗೆ ಸಂಬಂಧಿಸಿದ ಮಾಹಿತಿಗಾಗಿ ಅನುಷ್ಟಾನ ವಿಮಾ ಕಂಪನಿಯ ಪ್ರತಿನಿಧಿಗಳ ವಿವರ: ಧಾರವಾಡ ತಾಲೂಕಿನಲ್ಲಿ ರಾಮನಗೌಡ ಎಸ್ ಬಿರಾದಾರ್ (6361985987), ಶ್ರೀನಿವಾಸ ಟಿ (6366684606), ಆನಂದಗೌಡ ಮರಿಗೌಡರ (7975115966), ಗೂಳಪ್ಪ ಯಲಪ್ಪ ಸಂಗಟಿ (8123061055), ದೀಪಾ ಆರ್ ಬಾನಿ (7795131998), ಕುಂದಗೋಳ ತಾಲೂಕಿನಲ್ಲಿ ರಮೇಶ ಕಲ್ಲಪ್ಪ ಹಾವೇರಿ(7259182711), ಆದರ್ಶ ಮಹಾಂತೇಶಪ್ಪ ಗಾಣಿದರ್ (7022159476), ಸಂಜೀವ್ ಮಾಲಗೊಂಡರ್ (7204964190), ಹುಬ್ಬಳ್ಳಿ ತಾಲೂಕಿನಲ್ಲಿ ಬೀರೇಶ ಹುಲಿಗೆಪ್ಪ ವಡ್ಡರ (7975191577), ಅಣ್ಣಿಗೇರಿ ತಾಲೂಕಿನಲ್ಲಿ ರಾಜಾಭಕ್ಷಿ ದೊಡ್ಡೇಮನಿ (6362123480), ಟಿ ತೇಜಶ್ವಿನಿ (8147486281), ಕುಮಾರ ಹನುಮಂತಪ್ಪ ಮಜ್ಜಗಿ (9380336671), ನವಲಗುಂದ ತಾಲೂಕಿನಲ್ಲಿ ಹಣಮಂತ್ ಶಿರೋಳ್ (6360325401), ಕಾರ್ತಿಕ್ (9449400468), ರುದ್ರೇಶ್ ಕೆ ವಿ(9008332317), ಕಲಘಟಗಿ ತಾಲೂಕಿನಲ್ಲಿ ವಿನಾಯಕ ಬಸವರಾಜ ಕರಣಿ (8867078933), ನಾಗೇಶ ಮಾಳಿ (8431029742), ಅಳ್ನಾವರ ತಾಲೂಕಿನಲ್ಲಿ ಮನೋಜ್ ಕುಮಾರ್ ಪಿ ಕಂಬಳಿ (9591592235) ಇವರಿಗೆ ಸಂಪರ್ಕಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular