HomeLatest NewsBIG NEWS : ದೆಹಲಿಯ 'ಕರ್ನಾಟಕ ಭವನ'ದ ವಾಸ್ತವ್ಯ ದರ, ಮಾರ್ಗಸೂಚಿ ಪರಿಷ್ಕರಿಸಿ ರಾಜ್ಯ ಸರ್ಕಾರದಿಂದ...

BIG NEWS : ದೆಹಲಿಯ ‘ಕರ್ನಾಟಕ ಭವನ’ದ ವಾಸ್ತವ್ಯ ದರ, ಮಾರ್ಗಸೂಚಿ ಪರಿಷ್ಕರಿಸಿ ರಾಜ್ಯ ಸರ್ಕಾರದಿಂದ ಆದೇಶ.!

ಬೆಂಗಳೂರು : ದೆಹಲಿಯ ಕರ್ನಾಟಕ ಭವನದ ವಾಸ್ತವ್ಯ ದರ, ಮಾರ್ಗಸೂಚಿ ಪರಿಷ್ಕರಣೆ ಮಾಡಿ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

ಏನಿದೆ ಆದೇಶದಲ್ಲಿ..?

ನವದೆಹಲಿಯ ಕರ್ನಾಟಕ ಭವನವು ರಾಜ್ಯ ಸರ್ಕಾರದ ಆತಿಥ್ಯ ಸಂಸ್ಥೆಯ ಅಂಗವಾಗಿದ್ದು ಪ್ರಸ್ತುತ 03 ಭವನಗಳು ಕಾರ್ಯನಿರ್ವಹಿಸುತ್ತಿವೆ- ಕರ್ನಾಟಕ ಭವನ-1 ಅನೆಕ್ಸ್ ಕಟ್ಟಡ (ಚಾಣಕ್ಯಪುರಿ) ಕರ್ನಾಟಕ ಭವನ-2 (ಶರಾವತಿ) ಹಾಗೂ ಕರ್ನಾಟಕ ಭವನ-3 (ಭೀಮಾ), ಮೇಲೆ (1)ರಲ್ಲಿ ಓದಲಾದ ಸರ್ಕಾರದ ಆದೇಶದಲ್ಲಿ ನವದೆಹಲಿಯಲ್ಲಿರುವ ಕರ್ನಾಟಕ ಭವನಗಳ ವಾಸ್ತವ್ಯದ ದರಗಳನ್ನು ಹಾಗೂ ಷರತ್ತುಗಳನ್ನು ನಿಗದಿಪಡಿಸಿ ಪ್ರಕಟಿಸಲಾಗಿದೆ. ಆದರೆ, ಮೇಲೆ ಓದಲಾದ (2)ರ ಪತ್ರದಲ್ಲಿ ದರ ಹಾಗೂ ಕೊಠಡಿ ಹಂಚಿಕೆ ಮಾರ್ಗಸೂಚಿಗಳಿಗೆ ಕೆಲವೊಂದು ಮಾರ್ಪಾಡು ಮಾಡುವಂತೆ ನಿವಾಸಿ ಆಯುಕ್ತರು ಮತ್ತೊಮ್ಮೆ ಪ್ರಸ್ತಾವನೆ ಸಲ್ಲಿಸಿರುತ್ತಾರೆ. ಅಲ್ಲದೇ, ಕರ್ನಾಟಕ ವಿಧಾನಸಭೆಯ ಅಂದಾಜು ಸಮಿತಿ ಹಾಗೂ ಹಕ್ಕು ಭಾದ್ಯತೆಗಳ ಸಮಿತಿಗಳು ಸಹ ಕೆಲವೊಂದು ಮಾರ್ಪಾಡುಗಳನ್ನು ತರುವಂತೆ ಸೂಚಿಸಿರುತ್ತಾರೆ. ಈ ಪ್ರಸ್ತಾವನೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಸರ್ಕಾರವು ಈ ಕೆಳಕಂಡಂತೆ ಆದೇಶಿಸಿದೆ.
ನವದೆಹಲಿಯ ಕರ್ನಾಟಕ ಭವನಗಳ ವಾಸ್ತವ್ಯ ದರಗಳು, ಷರತ್ತು & ನಿಬಂಧನೆಗಳು ಹಾಗೂ ಕೊಠಡಿಗಳ ಹಂಚಿಕೆ ಮಾರ್ಗಸೂಚಿಗಳಿಗೆ ಸಂಬಂಧಿಸಿದಂತೆ ದಿನಾಂಕ: 29.03.2025ರ ಸಮ ಸಂಖ್ಯೆಯ ಸರ್ಕಾರದ ಆದೇಶ ಸಂಖ್ಯೆಯ ಅನುಬಂಧ-1ರಲ್ಲಿರುವ ವಾಸ್ತವ್ಯ ದರಗಳನ್ನು ಹಾಗೂ ಅನುಬಂಧ-2ರಲ್ಲಿರುವ ಕೊಠಡಿ ಹಂಚಿಕೆ ಮಾರ್ಗಸೂಚಿಗಳನ್ನು, ಕ್ರಮವಾಗಿ ಷರತ್ತು & ನಿಬಂಧನೆಗಳೊಂದಿಗೆ ಪರಿಷ್ಕರಿಸಿ ಆದೇಶಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular