HomeLatest NewsBREAKING : ರಾಜ್ಯದ ರೈತರಿಗೆ ಗುಡ್ ನ್ಯೂಸ್ : 'PM ಕುಸುಮ್-ಸಿ' ಯೋಜನೆಗೆ ಸಿಎಂ ಸಿದ್ದರಾಮಯ್ಯ ಚಾಲನೆ...

BREAKING : ರಾಜ್ಯದ ರೈತರಿಗೆ ಗುಡ್ ನ್ಯೂಸ್ : ‘PM ಕುಸುಮ್-ಸಿ’ ಯೋಜನೆಗೆ ಸಿಎಂ ಸಿದ್ದರಾಮಯ್ಯ ಚಾಲನೆ |WATCH VIDEO

ಚಿಕ್ಕಬಳ್ಳಾಪುರ : ರಾಜ್ಯದ ರೈತರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಹಗಲಲ್ಲೂ ಸಮರ್ಪಕ ವಿದ್ಯುತ್ ನೀಡುವ ‘ಕುಸುಮ್-ಸಿ’ ಯೋಜನೆಗೆ ಇಂದು ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ.

ಕೃಷಿ ಫೀಡರ್ ಗಳ ಸೋಲಾರ್ ವಿದ್ಯುತ್ ಮೂಲಕ ರೈತರ ಕೃಷಿಪಂಪ್ ಸೆಂಟ್ ಗಳಿಗೆ ಹಗಲಲ್ಲೂ ಸಮರ್ಪಕ ವಿದ್ಯುತ್ ನೀಡುವ ‘ಕುಸುಮ್-ಸಿ’ ಯೋಜನೆಯನ್ನು ಇಂದು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದ್ದಾರೆ.
ಗೌರಿಬಿದನೂರಿನ ಮಯ್ಯ ತೊಂಡೇಬಾವಿ ಹೋಬಳಿ ಹನುಮೇನಹಳ್ಳಿಯಲ್ಲಿ ಸ್ಥಾಪಿಸಿರುವ ಸೋಲಾರ್ ಘಟಕವನ್ನು ಉದ್ಘಾಟಿಸಿದ್ದಾರೆ.ಈ ಸಂದರ್ಭದಲ್ಲಿ ಇಂಧನ ಸಚಿವ ಕೆಜೆ ಜಾರ್ಜ್ ಮತ್ತಿತರರಿದ್ದರು.

ಕೃಷಿ ಪಂಪ್ಸೆಟ್ ಗಳಿಗೆ ಕುಸುಮ್ -ಬಿ ಸೋಲಾರ್ ಪವರ್ ಯೋಜನೆ ಜಾರಿಗೊಳಿಸಿದ್ದ ಸರ್ಕಾರ ಮತ್ತೊಂದು ಹೆಜ್ಜೆ ಮುಂದೆ ಇಟ್ಟಿದ್ದು, ಕುಸುಮ್ -ಸಿ ಸೋಲಾರ್ ಯೋಜನೆ ಜಾರಿಗೆ ಕ್ರಮ ಕೈಗೊಂಡಿದೆ.ಕುಸುಮ್ -ಸಿ ಯೋಜನೆಯಡಿ ಸೋಲಾರ್ ವಿದ್ಯುತ್ ಘಟಕ ಸ್ಥಾಪಿಸಲು ಮುಂದೆ ಬರುವವರಿಗೆ ಸರ್ಕಾರ ಪ್ರೋತ್ಸಾಹಕರ ಸೌಲಭ್ಯ ನೀಡಲಿದೆ. ಉತ್ಪಾದನೆಯಾದ ಸೋಲಾರ್ ವಿದ್ಯುತ್ ಅನ್ನು ಸಮೀಪದ ಗ್ರಿಡ್ ಗೆ ನೀಡಲು ಉದ್ದೇಶಿಸಲಾಗಿದೆ.

ಕುಸುಮ್ –ಬಿ ಯೋಜನೆಯಡಿ ರೈತರು ಸ್ವಂತ ಜಾಗ ಹೊಂದಿದ್ದರೆ ಪಂಪ್ಸೆಟ್ ಗೆ ಸೋಲಾರ್ ಪ್ಯಾನಲ್ ಅಳವಡಿಸಿಕೊಳ್ಳಲು ಸರ್ಕಾರವೇ ಸಬ್ಸಿಡಿ ನೀಡುವುದರಿಂದ ಅನೇಕ ರೈತರು ಅಳವಡಿಸಿಕೊಂಡಿದ್ದಾರೆ.
ರೈತರಿಗಾಗಿ ಜಾರಿಯಾಗಿರುವ ಕುಸುಮ್ ಸಿ ಯೋಜನೆಯು ಹಲವು ಅನುಕೂಲ ಕೊಡಲಿದೆ. ತಮ್ಮ ಕೃಷಿ ಪಂಪ್ಸೆಟ್ ಬಳಿಯೇ ರೈತರು ಸೋಲಾರ್ ಘಟಕಗಳನ್ನ ಸ್ಥಾಪಿಸಿಕೊಂಡು, ಹಗಲಲ್ಲೂ ಪಂಪ್ಸೆಟ್ಗೆ ವಿದ್ಯುತ್ ಸಂಪರ್ಕ ಕೊಟ್ಟುಕೊಳ್ಳಬಹುದು.ಈ ಮೂಲಕ ವಿದ್ಯುತ್ ಗ್ರಿಡ್ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ, ಇಂಧನ ವೆಚ್ಚವನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular