HomeLatest NewsBREAKING : ಬೆಂಗಳೂರಿಗೆ ಆಗಮಿಸಿದ 'RCB' : ಕೊಹ್ಲಿಗೆ ಕನ್ನಡದ ಬಾವುಟ ನೀಡಿ ಸ್ವಾಗತಿಸಿದ...

BREAKING : ಬೆಂಗಳೂರಿಗೆ ಆಗಮಿಸಿದ ‘RCB’ : ಕೊಹ್ಲಿಗೆ ಕನ್ನಡದ ಬಾವುಟ ನೀಡಿ ಸ್ವಾಗತಿಸಿದ DCM ಡಿ.ಕೆ.ಶಿವಕುಮಾರ್

ಬೆಂಗಳೂರು: ಐಪಿಎಲ್ ಕಪ್ ಗೆದ್ದಿರುವ ರಾಯಲ್ ಚಾಲೇಂಜರ್ಸ್ ಬೆಂಗಳೂರು ಕಪ್ ಹಿಡಿದು ಬೆಂಗಳೂರಿಗೆ ಆಗಮಿಸಿದೆ. ವಿರಾಟ್ ಕೊಹ್ಲಿ ನೇತೃತ್ವದಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿಗೆ ಬಂದ ಆರ್ ಸಿಬಿ ಆಟಗಾರರಿಗೆ ಅದ್ಧೂರಿ ಸ್ವಾಗತ ಕೋರಲಾಯಿತು.

ಅಹಮದಾಬಾದ್ ನಿಂದ ವಿಶೇಷ ವಿಮಾನದಲ್ಲಿ ಬೆಂಗಳೂರಿನ ಹೆಚ್ ಎ ಎಲ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ಆರ್ ಸಿಬಿ ಆಟಗಾರರನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಆತ್ಮೀಯವಾಗಿ ಸ್ವಾಗತಿಸಿದರು. ವಿರಾಟ್ ಕೊಹ್ಲಿಗೆ ಕನ್ನಡದ ಬಾವುಟ ಹಾಗೂ ಆರ್ ಸಿಬಿ ಧ್ವಜವನ್ನು ನೀಡಿ ಸ್ವಾಗತ ಕೋರಿದರು.

ಹೆಚ್ ಎ ಎಲ್ ಏರ್ ಪೋರ್ಟ್ ನಿಂದ ತಾಜ್ ವೆಸ್ಟ್ ಎಂಡ್ ವರೆಗೆ ವಿಶೇಷ ಬಸ್ ನಲ್ಲಿ ಆರ್ ಸಿಬಿ ಆಟಗಾರರನ್ನು ಕರೆತರಲಾಯಿತು. ಬಳಿಕ ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ ಗಳ ಮೇಲೆ ಆರ್ ಸಿಬಿ ಆಟಗಾರರಿಗೆ ಅಭಿನಂದನಾ ಸಮಾರಂಭ ನಡೆಯಲಿದೆ. ವಿಧಾನಸೌಧದ ಬಳಿ ಅಭಿಮಾನಿಗಳು ಕಿಕ್ಕಿರಿದು ನೆರೆದಿದ್ದು, ಎಲ್ಲೆಲ್ಲೂ ಆರ್ ಸಿಬಿ, ಆರ್ ಸಿಬಿ ಎಂಬ ಹರ್ಷೋದ್ಘಾರ ಮುಗಿಲುಮುಟ್ಟಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular