HomeLatest NewsBREAKING: HAL ಏರ್ ಪೋರ್ಟ್ ಗೆ ಬಂದಿಳಿದ RCB ಆಟಗಾರರು: ಅದ್ಧೂರಿ ಸ್ವಾಗತ

BREAKING: HAL ಏರ್ ಪೋರ್ಟ್ ಗೆ ಬಂದಿಳಿದ RCB ಆಟಗಾರರು: ಅದ್ಧೂರಿ ಸ್ವಾಗತ

ಬೆಂಗಳೂರು: 18 ವರ್ಷದ ಬಳಿಕ ಐಪಿಎಲ್ ಟ್ರೋಫಿ ಗೆದ್ದಿರುವ ರಾಯಲ್ ಚಾಲೇಂಜರ್ಸ್ ಬೆಂಗಳೂರು ತಂಡದ ಆಟಗಾರರು ಮೊದಲ ಟ್ರೋಫಿ ಕೈಯಲ್ಲಿ ಹಿಡಿದು ಬೆಂಗಳೂರಿಗೆ ಆಗಮಿಸಿದ್ದಾರೆ.

ಅಹಮದಾಬಾದ್ ನಿಂದ ವಿಶೇಷ ವಿಮಾನದಲ್ಲಿ ಬೆಂಗಳೂರಿನ ಹೆಚ್ ಎ ಎಲ್ ಏರ್ ಪೋರ್ಟ್ ಗೆ ಆರ್ ಸಿಬಿ ತಂಡದ ಆಟಗಾರರು ಬಂದಿಳಿದಿದ್ದಾರೆ. ತಮ್ಮ ನೆಚ್ಚಿನ ಆರ್ ಸಿಬಿ ತಂಡದ ಆಟಗಾರರನ್ನು ಸ್ವಾಗತಿಸಲು ವಿಮಾನ ನಿಲ್ದಾಣದ ಬಳಿ ಅಭಿಮಾನಿಗಳ ಸಾಗರವೇ ಹರಿದುಬಂದಿದೆ. ಆರ್ ಸಿಬಿ, ಆರ್ ಸಿಬಿ ಎಂಬ ಜಯಘೋಷಗಳು ಎಲ್ಲೆಲ್ಲೂ ಮೊಳಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೆಚ್ ಎ ಎಲ್ ಏರ್ ಪೋರ್ಟ್ ಗೆ ಆಗಮಿಸಿದ ಆರ್ ಸಿಬಿ ಆಟಗಾರರಿಗೆ ಅದ್ಧೂರಿ ಸ್ವಾಗತ ಕೋರಲಾಗಿದೆ. ಹೆಚ್ ಎ ಎನ್ ಏರ್ ಪೋರ್ಟ್ ನಿಂದ ಬಸ್ ಮೂಲಕವಾಗಿ ಆರ್ ಸಿಬಿ ಆಟಗಾರರು ವಿಧಾನಸೌಧಕ್ಕೆ ಆಗಮಿಸಲಿದ್ದಾರೆ. ವಿಧಾನಸೌಧದಲ್ಲಿ ಕೆಲವೇ ಹೊತ್ತಲ್ಲಿ ಆರ್ ಸಿಬಿ ಆತಗಾರರಿಗೆ ಅಭಿನಂದನಾ ಸಮಾರಂಭ ನಡೆಯಲಿದೆ.

For Latest News Updates, Join Our Whatsapp Community🚩
RELATED ARTICLES

Most Popular